ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ಸಾಂಸ್ಕೃತಿಕ ಇತಿಹಾಸದ ಕೊಂಡಿಯಂತಿದ್ದ ಖ್ಯಾತ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ ಅವರ ಶತಮಾನದಷ್ಟು ಹಳೆಯ ಅಜ್ಜನ ಮನೆಯನ್ನು ಬಾಂಗ್ಲಾದೇಶದ ಹಂಗಾಮಿ ಸರ್ಕಾರ ನೆಲಸಮ ಮಾಡಿದೆ. ಇಲ್ಲಿ ಅರೆ ಕಾಂಕ್ರೀಟ್ ಕಟ್ಟಡವೊಂದನ್ನು ಕಟ್ಟಲು ಸರ್ಕಾರ ಮುಂದಾಗಿದೆ.
ಮಧ್ಯಂತರ ಸರ್ಕಾರದ ಈ ಕ್ರಮವನ್ನು ಭಾರತವು ತೀವ್ರವಾಗಿ ಖಂಡಿಸಿದ್ದು, ಇದೊಂದು ‘ತೀವ್ರ ವಿಷಾದದ ವಿಚಾರ’ ಎಂದು ಬಣ್ಣಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದನ್ನು ವಿರೋಧಿಸಿದ್ದಾರೆ. ಎರಡೂ ದೇಶಗಳ ಬಾಂಧವ್ಯವು ಹದಗೆಟ್ಟಿರುವ ಈ ಹೊತ್ತಿನಲ್ಲಿ ಹಂಗಾಮಿ ಸರ್ಕಾರದ ಈ ಕ್ರಮವು ಬೇರೊಂದು ರೀತಿಯ ತಿಕ್ಕಾಟಕ್ಕೆ ನಾಂದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಬಾಂಗ್ಲಾ ಸರ್ಕಾರದ ಕ್ರಮಕ್ಕೆ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದೇಶದೊಳಗಿರುವ ಎಲ್ಲ ಹಿಂದೂ ಬೇರುಗಳನ್ನು ಕಿತ್ತೆಸೆಯಲಾಗುತ್ತಿದೆ’ ಎಂದು ಕೆಲವು ಬಾಂಗ್ಲಾದೇಶದ ಧ್ವಜವಿರುವ ಖಾತೆಗಳು ಪೋಸ್ಟ್ ಹಂಚಿಕೊಂಡಿವೆ.
ಟ್ಯಾಗೋರ್ ಪೂರ್ವಜರ ಮನೆಯೂ ಧ್ವಂಸ: ಲೇಖಕ ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಮನೆಯು ಬಾಂಗ್ಲಾದ ಸಿರಾಜ್‌ಗಂಜ್ ಜಿಲ್ಲೆಯಲ್ಲಿದೆ. ಇದನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಸಿಬ್ಬಂದಿ ಹಾಗೂ ವೀಕ್ಷಕರೊಬ್ಬರ ಮಧ್ಯೆ ನಡೆದಿದ್ದ ಜಗಳದಲ್ಲಿ ವಸ್ತುಸಂಗ್ರಹಾಲಯಕ್ಕೆ ಜೂನ್‌ನಲ್ಲಿ ಹಾನಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.