ADVERTISEMENT

ರಷ್ಯಾ ಸೇನೆಯಲ್ಲಿರುವ ಭಾರತೀಯರ ವಾಪಸಾತಿಗೆ ಒತ್ತಾಯ

ಪಿಟಿಐ
Published 17 ಜನವರಿ 2025, 12:48 IST
Last Updated 17 ಜನವರಿ 2025, 12:48 IST
ರಣಧೀರ್ ಜೈಸ್ವಾಲ್
ರಣಧೀರ್ ಜೈಸ್ವಾಲ್   

ನವದೆಹಲಿ: ರಷ್ಯಾ ಸೇನೆಯಲ್ಲಿರುವ ಭಾರತೀಯರನ್ನು ವಾಪಸ್ ತವರಿಗೆ ಕಳುಹಿಸುವಂತೆ ಭಾರತವು ರಷ್ಯಾವನ್ನು ಒತ್ತಾಯಿಸಿದೆ.

ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 16 ಭಾರತೀಯರು ನಾಪತ್ತೆಯಾಗಿರುವುದಾಗಿ ರಷ್ಯಾವು ಮಾಹಿತಿ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ.

ರಷ್ಯಾದ ಸೇನೆಯಲ್ಲಿ ತೊಡಗಿಸಿಕೊಂಡಿದ್ದವರಲ್ಲಿ ಇದುವರೆಗೆ 12 ಭಾರತೀಯರು ಮೃತಪಟ್ಟಿದ್ದಾರೆ. ಭಾರತೀಯ ಪ್ರಜೆಗಳು ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ 126 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 96 ಜನರು ಅಲ್ಲಿನ ಸಶಸ್ತ್ರ ಪಡೆಗಳಿಂದ ಬಿಡುಗಡೆ ಹೊಂದಿ, ಭಾರತಕ್ಕೆ ಮರಳಿದ್ದಾರೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ADVERTISEMENT

‘ರಷ್ಯಾ ಸೇನೆಯಲ್ಲಿ ಇನ್ನೂ 18 ಭಾರತೀಯ ಪ್ರಜೆಗಳು ಉಳಿದಿದ್ದಾರೆ. ಅವರಲ್ಲಿ 16 ವ್ಯಕ್ತಿಗಳ ಬಗ್ಗೆ ಸುಳಿವಿಲ್ಲ. ಅವರನ್ನು ನಾಪತ್ತೆಯಾದವರೆಂದು ರಷ್ಯಾ ವರ್ಗೀಕರಿಸಿದೆ. ಉಳಿದವರನ್ನು ಶೀಘ್ರ ಬಿಡುಗಡೆ ಮಾಡಿಸಿ, ದೇಶಕ್ಕೆ ವಾಪಸ್‌ ಕರೆತರಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಜೈಸ್ವಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.