ADVERTISEMENT

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ರೈತರು, ಉದ್ಯಮಗಳಿಗೆ ಭಾರಿ ಅವಕಾಶ; ಗೋಯಲ್

ಏಜೆನ್ಸೀಸ್
Published 3 ಫೆಬ್ರುವರಿ 2026, 2:39 IST
Last Updated 3 ಫೆಬ್ರುವರಿ 2026, 2:39 IST
<div class="paragraphs"><p>ಪೀಯೂಷ್‌ ಗೋಯಲ್</p></div>

ಪೀಯೂಷ್‌ ಗೋಯಲ್

   

ನವದೆಹಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದಿಂದ ರೈತರು, ಎಂಎಸ್‌ಎಂಇಗಳು, ಉದ್ಯಮಿಗಳು ಮತ್ತು ಕೌಶಲ್ಯಯುಕ್ತ ಕಾರ್ಮಿಕರಿಗೆ ವಿಫುಲ ಅವಕಾಶಗಳು ಲಭ್ಯವಾಗಲಿದ್ದು ’ಮೇಕ್ ಇನ್ ಇಂಡಿಯಾ‘ಗೆ ಬಲ ದೊರೆಯಲಿದೆ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್ ಮಂಗಳವಾರ ಹೇಳಿದರು.

ಅಮೆರಿಕ ಸುಂಕ ಇಳಿಕೆ ಬಗ್ಗೆ ಸಚಿವ ಪೀಯೂಷ್‌ ಗೋಯಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಒಪ್ಪಂದವು ರೈತರು, ಎಂಎಸ್‌ಎಂಇಗಳು, ಉದ್ಯಮಿಗಳು ಮತ್ತು ಕೌಶಲ್ಯಯುಕ್ತ ಕಾರ್ಮಿಕರಿಗೆ ವಿಫುಲ ಅವಕಾಶಗಳು ಲಭ್ಯವಾಗಲಿವೆ. ವಿಶ್ವಕ್ಕಾಗಿ ಭಾರತದಲ್ಲಿ ತಯಾರಿಕೆ, ವಿಶ್ವಕ್ಕಾಗಿ ಭಾರತದಲ್ಲಿ ವಿನ್ಯಾಸ ಮತ್ತು ವಿಶ್ವಕ್ಕಾಗಿ ಭಾರತದಲ್ಲಿ ನಾವೀನ್ಯತೆ ಎಂಬ ಉಪಕ್ರಮಗಳಿಗೆ ಅವಕಾಶಗಳು ತೆರೆದಿವೆ ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

ಭಾರತ ಮತ್ತು ಅಮೆರಿಕ ಮಿತ್ರ ರಾಷ್ಟ್ರಗಳಾಗಿದ್ದು ನಮ್ಮ ಪಾಲುದಾರಿಕೆ ತಂತ್ರಜ್ಞಾನ, ವಿಜ್ಞಾನ, ಉದ್ಯಮ, ಕೈಗಾರಿಕೆ ಸೇರಿದಂತೆ ಇತರೆ ವಲಯಗಳಲ್ಲಿನ ಬೆಳವಣಿಗೆಗೆ ಪೂರಕವಾಗಿರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದ್ದು  ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಘೋಷಿಸಿದ್ದಾರೆ. ಅಮೆರಿಕವು ಪ್ರತಿಸುಂಕವನ್ನು ಶೇ 18ಕ್ಕೆ ಇಳಿಸಲಿದೆ’ ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ

ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾದ ನಂತರದಲ್ಲಿ, ಭಾರತದಿಂದ ಆಮದು ಆಗುವ ಸರಕುಗಳಿಗೆ ಶೇಕಡ 50ರಷ್ಟು ಸುಂಕ ವಿಧಿಸಿದ್ದಾರೆ. ಈ ಪೈಕಿ ಶೇ 25ರಷ್ಟು ‘ಪ್ರತಿಸುಂಕ’ದ ರೀತಿಯಲ್ಲಿದೆ. ಇನ್ನುಳಿದ ಶೇ 25ರಷ್ಟು ಸುಂಕವನ್ನು, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೇರಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.