ADVERTISEMENT

ನೇಪಾಳ ಜತೆಗಿನ ಬಿಕ್ಕಟ್ಟು: ಮಾತುಕತೆ ಮೂಲಕ ಪರಿಹಾರ–ರಾಜನಾಥ್‌ ಸಿಂಗ್‌

ಪಿಟಿಐ
Published 9 ಜುಲೈ 2020, 2:46 IST
Last Updated 9 ಜುಲೈ 2020, 2:46 IST
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌    

ನವದೆಹಲಿ: ಲಿಪುಲೇಶ್‌ ಪಾಸ್‌ವರೆಗೆ ಭಾರತ ನಿರ್ಮಿಸಿರುವ ರಸ್ತೆಯು ದೇಶದ ಗಡಿಯ ವ್ಯಾಪ್ತಿಯೊಳಗೇ ಬರುತ್ತದೆ. ನೇಪಾಳದೊಂದಿಗಿನ ಬಾಂಧವ್ಯದ ತಪ್ಪುತಿಳಿವಳಿಕೆಯನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಭಾವಿಸಿರುವುದಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೋಮವಾರ ಹೇಳಿದರು.

ಉತ್ತರಾಖಂಡದಲ್ಲಿನ ರ‍್ಯಾಲಿಯನ್ನುವಿಡಿಯೊ ಮೂಲಕಉದ್ದೇಶಿಸಿ ಮಾತನಾಡಿದ ಅವರು,ವಿಶ್ವದ ಯಾವ ಶಕ್ತಿಯಿಂದಲೂ ಭಾರತ– ನೇಪಾಳದ ‘ರೋಟಿ– ಬೇಟಿ’ ಬಾಂಧವ್ಯವನ್ನು ಮುರಿಯಲು ಸಾಧ್ಯವಿಲ್ಲ ಎಂದರು.

’ನಮ್ಮ ಬಾಂಧವ್ಯ ಕೇವಲ ಐತಿಹಾಸಿಕ, ಸಾಂಸ್ಕೃತಿಕ ಮಾತ್ರವಲ್ಲ ಬಾಂಧವ್ಯಕ್ಕೆ ಆಧ್ಯಾತ್ಮಕ ಬೆಸುಗೆಯೂ ಇದೆ. ಇದನ್ನು ಭಾರತ ಎಂದಿಗೂ ಮರೆಯುವುದಿಲ್ಲ' ಎಂದ ಅವರು ಭಾರತ–ನೇಪಾಳ ಸಂಬಂಧಕ್ಕೆ ಧಕ್ಕೆಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ADVERTISEMENT

ಭಾರತದ ಭೂಪ್ರದೇಶಗಳನ್ನು ಹೊಂದಿರುವ ರಾಜಕೀಯ ಭೂಪಟದ ಪರಿಷ್ಕರಣೆಗೆ ಅಗತ್ಯವಾಗಿರುವ ಸಾಂವಿಧಾನಿಕ ತಿದ್ದುಪಡಿಗೆ ನೇಪಾಳದ ಸಂಸತ್ತಿನ ಈಚೆಗೆ ಅನುಮೋದನೆ ನೀಡಿತ್ತು.

ಭಾರತ ಕೈಗೊಂಡ ರಸ್ತೆ ಕಾಮಗಾರಿಯಿಂದ ನೇಪಾಳದ ಜನರಿಗೆ ತಪ್ಪು ಅಭಿಪ್ರಾಯ ಬಂದಿದ್ದರೆ, ಅದನ್ನು ಮಾತುಕತೆ ಮೂಲಕ ಬಗೆಹರಿಸಬಹುದು. ಭಾರತದ ಜನರು ನೇಪಾಳದ ಬಗ್ಗೆ ಕಹಿ ಭಾವನೆಯನ್ನು ಎಂದಿಗೂ ಹೊಂದಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.