ADVERTISEMENT

ಲಡಾಖ್‌ನ ಗೋಗ್ರಾ ಹಾಟ್ ಸ್ಪ್ರಿಂಗ್‌ನಿಂದ ಭಾರತ –ಚೀನಾ ಸೇನೆ ಹಿಂತೆಗೆತ ಆರಂಭ

ಗೋಗ್ರಾ ಹಾಟ್ ಸ್ಪ್ರಿಂಗ್ಸ್ ಪ್ರದೇಶ

ಪಿಟಿಐ
Published 8 ಸೆಪ್ಟೆಂಬರ್ 2022, 14:34 IST
Last Updated 8 ಸೆಪ್ಟೆಂಬರ್ 2022, 14:34 IST
–ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪೂರ್ವ ಲಡಾಖ್‌ನ ಗೋಗ್ರಾ ಹಾಟ್ ಸ್ಪ್ರಿಂಗ್ಸ್ ಗಡಿ ಪ್ರದೇಶದಿಂದ ಸೇನಾ ವಾಪಸಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಭಾರತ ಮತ್ತು ಚೀನಾದ ಸೇನೆ ಗುರುವಾರ ತಿಳಿಸಿದೆ.

ಗಸ್ತು ಪಾಯಿಂಟ್ 15ರಲ್ಲಿ (ಪಿಪಿ 15) ಎರಡು ವರ್ಷಗಳಿಂದ ಉಭಯ ದೇಶಗಳು ಸೈನಿಕರನ್ನು ನಿಯೋಜಿಸಿದ್ದವು.

ಜುಲೈ ತಿಂಗಳಲ್ಲಿ ನಡೆದಿದ್ದ 16ನೇ ಸುತ್ತಿನ ಉನ್ನತ ಮಟ್ಟದ ಸೇನಾ ಮಾತುಕತೆಯ ಪರಿಣಾಮವಾಗಿ ಈ ಪ್ರದೇಶದಿಂದ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಲಾಗುತ್ತಿದೆ ಎಂದು ಉಭಯ ದೇಶಗಳು ಹೇಳಿಕೆಯಲ್ಲಿ ತಿಳಿಸಿವೆ.

ADVERTISEMENT

ಗಡಿಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಸೇನಾ ಪಡೆಯ ವಾಪಸಾತಿ ಪ್ರಕ್ರಿಯೆ ಯೋಜಿತ ರೀತಿಯಲ್ಲಿ ನಡೆಯುತ್ತಿದೆ ಎಂದೂ ಹೇಳಿವೆ.

ಉಜ್ಬೇಕಿಸ್ತಾನದಲ್ಲಿ ಮುಂದಿನ ವಾರ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ(ಎಸ್‌ಸಿಒ) ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಸಾಧ್ಯತೆ ಇದ್ದು, ಇದಕ್ಕೆ ಪೂರ್ವಭಾವಿಯಾಗಿ ಈ ಘೋಷಣೆ ಹೊರಬಂದಿದೆ.

ಎಸ್‌ಸಿಒ ಶೃಂಗಸಭೆಯಲ್ಲಿ ಉಭಯ ದೇಶಗಳ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.