ADVERTISEMENT

ಪಾಕಿಸ್ತಾನದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

ಏಜೆನ್ಸೀಸ್
Published 24 ಅಕ್ಟೋಬರ್ 2020, 8:24 IST
Last Updated 24 ಅಕ್ಟೋಬರ್ 2020, 8:24 IST
   

ಶ್ರೀನಗರ: ಪಾಕಿಸ್ತಾನ ಸೇನೆಯ ಅತ್ಯಾಧುನಿಕ ಡ್ರೋನ್ (ಕ್ವಾಡ್‌ಕಾಪ್ಟರ್) ಅನ್ನು ಶನಿವಾರ ಬೆಳಿಗ್ಗೆ ಭಾರತೀಯ ಸೇನೆ ಹೊಡೆದುರುಳಿಸಿದೆ.

ಜಮ್ಮು–ಕಾಶ್ಮೀರದ ಕೇರನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಬೆಳಿಗ್ಗೆ 8 ಗಂಟೆಗೆ ಕ್ವಾಡ್‌ಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಚೀನಾ ಕಂಪನಿ ಡಿಜೆಐ ಮಾವಿಕ್ ‘2 ಪ್ರೊ’ ಮಾಡೆಲ್‌ನ ಕ್ವಾಡ್‌ಕಾಪ್ಟರ್ ಎಲ್‌ಒಸಿ ಬಳಿ ಹಾರಾಡುತ್ತಿತ್ತು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.