ADVERTISEMENT

ಕೋವಿಡ್‌: 14 ತಿಂಗಳಲ್ಲಿ ಪಾಲಕರನ್ನು ಕಳೆದುಕೊಂಡ ಭಾರತದ 1.19 ಲಕ್ಷ ಮಕ್ಕಳು

ಪಿಟಿಐ
Published 21 ಜುಲೈ 2021, 4:34 IST
Last Updated 21 ಜುಲೈ 2021, 4:34 IST
ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳು–ಸಾಂದರ್ಭಿಕ ಚಿತ್ರ
ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳು–ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಕೋವಿಡ್‌–19 ಸಾಂಕ್ರಾಮಿಕದ ಮೊದಲ 14 ತಿಂಗಳಲ್ಲಿ ಇಪತ್ತೊಂದು ರಾಷ್ಟ್ರಗಳ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಪಾಲಕರನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿಯೇ 1.19 ಲಕ್ಷ ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿರುವುದು ದಿ ಲ್ಯಾನ್‌ಸೆಟ್‌ನಲ್ಲಿ ಪ್ರಕಟಿಸಿರುವ ಅಧ್ಯಯನ ವರದಿಯಿಂದ ತಿಳಿದು ಬಂದಿದೆ.

ಅಧ್ಯಯನದ ಪ್ರಕಾರ, ಭಾರತದಲ್ಲಿ 25,500 ಮಕ್ಕಳು ಕೋವಿಡ್‌–19 ಕಾರಣಗಳಿಂದಾಗಿ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ ಹಾಗೂ 90,751 ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ. 12 ಮಕ್ಕಳು ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. 2,898 ಮಕ್ಕಳು ತಾತ ಅಥವಾ ಅಜ್ಜಿಯನ್ನು ಕಳೆದುಕೊಂಡಿದ್ದಾರೆ.

ಜಗತ್ತಿನ 21 ರಾಷ್ಟ್ರಗಳಲ್ಲಿ ಒಟ್ಟು 15,62,000 ಮಕ್ಕಳು ಅಪ್ಪ–ಅಮ್ಮ, ಅಜ್ಜಿ–ತಾತ ಅಥವಾ ಇತರೆ ಪಾಲಕರನ್ನು ಕಳೆದುಕೊಂಡಿರುವುದಾಗಿ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್‌) ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ದಕ್ಷಿಣ ಆಫ್ರಿಕಾ, ಮೆಕ್ಸಿಕೊ, ಬ್ರೆಜಿಲ್‌, ಕೊಲಂಬಿಯಾ, ಇರಾನ್‌, ಅಮೆರಿಕ, ಅರ್ಜೆಂಟಿನಾ, ಬ್ರೆಜಿಲ್‌, ಭಾರತ ಹಾಗೂ ರಷ್ಯಾದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ ಅಧಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.