
ಪಿಟಿಐ
ಅಹಮದಾಬಾದ್ (ಪಿಟಿಐ): ಅಂತರರಾಷ್ಟ್ರೀಯ ಜಲಗಡಿ ರೇಖೆ ದಾಟಿ ಭಾರತದ ಸಮುದ್ರ ಪ್ರದೇಶವನ್ನು ಪ್ರವೇಶಿಸಿದ್ದ ಪಾಕಿಸ್ತಾನದ ಮೀನುಗಾರಿಕೆ ಹಡಗನ್ನು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ವಶಕ್ಕೆ ಪಡೆದಿದೆ. ಹಡಗಿನಲ್ಲಿ 9 ಮಂದಿ ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
‘ಅರೇಬಿಯನ್ ಸಮುದ್ರದಲ್ಲಿ ಐಸಿಜಿ ಹಡಗು ಗಸ್ತು ತಿರುಗುವಾಗ ಜನವರಿ 14ರಂದು ರಾತ್ರಿ ಪಾಕಿಸ್ತಾನದ ಹಡಗು ‘ಅಲ್ ಮದೀನ’ ಗೋಚರಿಸಿತ್ತು’ ಎಂದು ಗುಜರಾತ್ ರಕ್ಷಣಾ ವಿಂಗ್ ಕಮಾಂಡರ್ (ಪಿಆರ್‌ಒ) ಅಭಿಷೇಕ್ ಕುಮಾರ್ ತಿವಾರಿ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಪೋರಬಂದರ್‌ಗೆ ಪಾಕ್ ಹಡಗನ್ನು ಎಳೆದು ತಂದಿದ್ದು, ಸಂಬಂಧಿಸಿದ ಸಂಸ್ಥೆಗಳು, ಸಿಬ್ಬಂದಿಯ ವಿಚಾರಣೆ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.