ADVERTISEMENT

ಚಿನ್ನದ ಮಾಸ್ಕ್‌ ಧರಿಸಿ ಗಮನಸೆಳೆದ ವ್ಯಕ್ತಿ

₹3 ಲಕ್ಷ ಮೌಲ್ಯ: 60 ಗ್ರಾಂ ತೂಕ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 9:11 IST
Last Updated 5 ಜುಲೈ 2020, 9:11 IST
ಚಿನ್ನದ ಮಾಸ್ಕ್‌ ಧರಿಸಿರುವ ಶಂಕರ್‌ ಕುರಾಡೆ  ಪಿಟಿಐ
ಚಿನ್ನದ ಮಾಸ್ಕ್‌ ಧರಿಸಿರುವ ಶಂಕರ್‌ ಕುರಾಡೆ  ಪಿಟಿಐ   

ಪುಣೆ:ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲುಇಲ್ಲಿನ ಉದ್ಯಮಿಯೊಬ್ಬರು ಸುಮಾರು₹ 3ಲಕ್ಷ ಮೌಲ್ಯದ ಚಿನ್ನದ ಮಾಸ್ಕ್‌ ಧರಿಸಿ ಗಮನಸೆಳೆದಿದ್ದಾರೆ.

ಇದು 60 ಗ್ರಾಂ ತೂಕದಾಗಿದ್ದು, ಎಂಟು ದಿನಗಳಲ್ಲಿ ತಯಾರಿಸಲಾಗಿದೆ. ಉದ್ಯಮಿ ಶಂಕರ್‌ ಕುರಾಡೆ (49) ಎನ್ನುವವರು ಈ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ.

‌‘ಇದು ತೆಳುವಾದ ಮಾಸ್ಕ್‌. ಇದರಲ್ಲಿ ರಂಧ್ರಗಳಿದ್ದು, ಉಸಿರಾಡಲು ತೊಂದರೆಯಾಗುವುದಿಲ್ಲ’ ಎಂದು ಶಂಕರ್‌ ತಿಳಿಸಿದ್ದಾರೆ.

ADVERTISEMENT

‘ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಇದು ಪರಿಣಾಮಕಾರಿಯಾಗಿದೆಯೇ ಎನ್ನುವುದು ನನಗೆ ಗೊತ್ತಿಲ್ಲ. ಆದರೂ, ನಾನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೇನೆ. ಚಿನ್ನದ ಮಾಸ್ಕ್ ಧರಿಸಿದ ಬಳಿಕ ಜನರು ನನ್ನ ಜತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಚಿನ್ನದ ಆಭರಣಗಳ ಮೇಲೆ ಇವರಿಗೆ ಅಪಾರ ವ್ಯಾಮೋಹ. ಕುತ್ತಿಗೆ, ಕೈಬೆರಳುಗಳು ಮತ್ತು ಬಲಗೈಗೆ ಚಿನ್ನದ ಆಭರಣಗಳು ಮತ್ತು ಉಂಗುರುಗಳನ್ನು ಧರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.