ADVERTISEMENT

ಡಿ.17ಕ್ಕೆ ಭಾರತದ ನೌಕಾಪಡೆಗೆ ಎಂಎಚ್‌–60ಆರ್‌ ಹೆಲಿಕಾಪ್ಟರ್‌ ನಿಯೋಜನೆ

ಪಿಟಿಐ
Published 14 ಡಿಸೆಂಬರ್ 2025, 15:57 IST
Last Updated 14 ಡಿಸೆಂಬರ್ 2025, 15:57 IST
   

ನವದೆಹಲಿ: ಭಾರತದ ನೌಕಾಪಡೆಯು ತನ್ನ ಎರಡನೆಯ ಎಂಎಚ್‌–60ಆರ್‌ ಹೆಲಿಕಾಪ್ಟರ್‌ ಸ್ಕ್ವಾಡ್ರನ್‌ ಅನ್ನು ಗೋವಾದ  ಐಎನ್‌ಎಸ್‌ ಹನ್ಸ್‌ನಲ್ಲಿ  ಡಿ.17ರಂದು ನಿಯೋಜಿಸಲಿದೆ.

ಸುಧಾರಿತ ಆಯುಧಗಳು, ಸೆನ್ಸರ್‌ಗಳು ಹಾಗೂ ಸಂಯೋಜಿತ ಎಲೆಕ್ಟ್ರಾನಿಕ್ಸ್‌ ಸೌಲಭ್ಯಗಳನ್ನು ಒಳಗೊಂಡ ಈ ಹೆಲಿಕಾಪ್ಟರ್‌ ನೌಕಾಪಡೆಯ ಪ್ರಮುಖ ಆಸ್ತಿ. ಸಾಂಪ್ರದಾಯಿಕ ಮತ್ತು ಅನಿರೀಕ್ಷಿತ ದಾಳಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಎಂಎಚ್‌–60ಆರ್‌ ಹೊಂದಿದೆ. ನೌಕಾಪಡೆ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ಕೆ. ತ್ರಿಪಾಠಿ ಸಮ್ಮುಖದಲ್ಲಿ ನಿಯೋಜನೆ ನಡೆಯಲಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT