ADVERTISEMENT

ಜಲಾಂತರ್ಗಾಮಿ: ವಿಸ್ತೃತ ಶ್ರೇಣಿ ರಾಕೆಟ್‌ ವ್ಯವಸ್ಥೆ ಪರೀಕ್ಷೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 17:37 IST
Last Updated 9 ಜುಲೈ 2025, 17:37 IST
<div class="paragraphs"><p>ವಿಸ್ತೃತ ಶ್ರೇಣಿಯ ಜಲಾಂತರ್ಗಾಮಿ ನಿಗ್ರಹ ರಾಕೆಟ್‌ ಪರೀಕ್ಷೆಯು ಯಶಸ್ವಿಯಾಗಿ ನಡೆಯಿತು</p></div>

ವಿಸ್ತೃತ ಶ್ರೇಣಿಯ ಜಲಾಂತರ್ಗಾಮಿ ನಿಗ್ರಹ ರಾಕೆಟ್‌ ಪರೀಕ್ಷೆಯು ಯಶಸ್ವಿಯಾಗಿ ನಡೆಯಿತು

   

–ಪಿಟಿಐ ಚಿತ್ರ

ನವದೆಹಲಿ: ಜಲಾಂತರ್ಗಾಮಿಗಳ ಮೇಲಿನ ದಾಳಿಗೆ ಬಳಸುವ ಕ್ಷಿಪಣಿ ಗಳನ್ನು ಹೊಡೆದುರುಳಿಸಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ವಿಸ್ತೃತ ಶ್ರೇಣಿಯ ರಾಕೆಟ್‌ಗಳ ವ್ಯವಸ್ಥೆಯ (ಇಆರ್‌ಎಎಸ್‌ಆರ್‌) ಪರೀಕ್ಷೆ ಯಶಸ್ವಿಯಾಗಿದೆ.

ADVERTISEMENT

ಜೂನ್‌ 23ರಿಂದ ಜುಲೈ7ರವರೆಗೆ ಯುದ್ಧನೌಕೆ ಐಎನ್‌ಎಸ್‌ ಕವರತ್ತಿ ಮೂಲಕ ಭಾರತೀಯ ನೌಕಾಪಡೆಯು ಈ ಪರೀಕ್ಷೆ ನಡೆಸಿದೆ. ಈ ರಾಕೆಟ್‌ ವ್ಯವಸ್ಥೆಯು ಭಾರತೀಯ ನೌಕಾಪಡೆಯ ಬಲ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಮಾಹಿತಿ ನೀಡಿದ್ದಾರೆ.

ವಿವಿಧ ಶ್ರೇಣಿಯ ಒಟ್ಟು 17 ಇಆರ್‌ಎಎಸ್‌ಆರ್‌ ರಾಕೆಟ್‌ಗಳನ್ನು ಪರೀಕ್ಷಿಸಲಾಗಿದ್ದು, ಡಿಆರ್‌ಡಿಒ ಇವುಗಳನ್ನು ಅಭಿವೃದ್ಧಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.