ADVERTISEMENT

ಭಾರತದ ಫಾರ್ಮಾ ಕಂಪನಿಗಳ ಸಾಮರ್ಥ್ಯಕ್ಕೆ ಬಿಲ್‌ ಗೇಟ್ಸ್‌ ಮೆಚ್ಚುಗೆ

ಪಿಟಿಐ
Published 16 ಜುಲೈ 2020, 9:48 IST
Last Updated 16 ಜುಲೈ 2020, 9:48 IST
ಬಿಲ್‌ ಗೇಟ್ಸ್‌
ಬಿಲ್‌ ಗೇಟ್ಸ್‌   

ನವದೆಹಲಿ: ‘ಭಾರತದ ಫಾರ್ಮಾ ಕಂಪನಿಗಳು ಕೇವಲ ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಕೋವಿಡ್‌–19 ಲಸಿಕೆ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ’ ಎಂದು ಮೈಕ್ರೊಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹೇಳಿದ್ದಾರೆ.

ಕೋವಿಡ್‌–19: ವೈರಸ್‌ ವಿರುದ್ಧ ಭಾರತದ ಸಮರ ಕುರಿತು ‘ಡಿಸ್ಕವರಿ ಪ್ಲಸ್‌’ನ ಸಾಕ್ಷ್ಯಚಿತ್ರಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ಸಾಧನೆ, ಆರೋಗ್ಯ ಬಿಕ್ಕಟ್ಟು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಶ್ಲೇಷಿಸಿದ್ದಾರೆ.

‘ಭಾರತದಲ್ಲಿ ಹಲವು ಅತ್ಯುತ್ತಮ ಕಾರ್ಯಗಳು ನಡೆದಿವೆ. ಫಾರ್ಮಾ ಕಂಪನಿಗಳು ಸಹ ಉತ್ತಮ ಸಾಧನೆಗೈದಿದ್ದು, ಇಡೀ ಜಗತ್ತಿಗೆ ಔಷಧ ಮತ್ತು ಲಸಿಕೆ ಪೂರೈಸುತ್ತಿವೆ. ಭಾರತದಲ್ಲೇ ಅತಿ ಹೆಚ್ಚು ವಿವಿಧ ಲಸಿಕೆಗಳನ್ನು ತಯಾರಿಸುತ್ತಿರುವುದು ವಿಶೇಷವಾಗಿದೆ. ಬಯೊ ಇ, ಭಾರತ್‌ (ಬಯೊಟೆಕ್‌) ಸೇರಿದಂತೆ ಹಲವು ಕಂಪನಿಗಳು ಕೋವಿಡ್‌–19ಗೆ ಲಸಿಕೆ ಕಂಡು ಹಿಡಿಯುವಲ್ಲಿ ನಿರತವಾಗಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಭಾರತದ ಫಾರ್ಮಾ ಉದ್ಯಮ ಜಗತ್ತಿಗೆ ಲಸಿಕೆ ಪೂರೈಸಲಿವೆ ಎನ್ನುವ ಆಶಾಭಾವ ಹೊಂದಿದ್ದೇನೆ’ ಎಂದು ವಿವರಿಸಿದ್ದಾರೆ.

ADVERTISEMENT

‘ಭಾರತ ಈಗ ಅತಿ ದೊಡ್ಡ ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿದೆ. ಜನಸಂಖ್ಯೆ, ವಿಶಾಲವಾದ ಭೌಗೋಳಿಕ ಪ್ರದೇಶವೂ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಇಂತಹ ಬಹು ದೊಡ್ಡ ಸವಾಲಿನ ನಡುವೆಯೂ ವೈರಸ್‌ ಸೋಂಕು ಹಬ್ಬದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.