ADVERTISEMENT

ವಿಂಗ್ ಕಮಾಂಡರ್ ಅಭಿನಂದನ್‌ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ...

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 8:24 IST
Last Updated 2 ಮಾರ್ಚ್ 2019, 8:24 IST
   

ಅಂದು ಬುಧವಾರ,ಸಮಯ ಬೆಳಗ್ಗೆ 8.45ರ ಸುಮಾರು.

ಪಾಕ್‌ಆಕ್ರಮಿತ ಕಾಶ್ಮೀರ ಪ್ರದೇಶದ ಭಿಂಬೆರ್‌ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆಯಿಂದ ಕೇವಲ 7 ಕಿ.ಮೀ ದೂರದಲ್ಲಿರುವ ಹೊರ್ರಾ ಹಳ್ಳಿಯ ನಿವಾಸಿ ಮೊಹಮ್ಮದ್‌ ರಜಾಕ್‌ ಚೌಧರಿಗೆ, ತಮ್ಮ ಮನೆಯಂಗಳದಲ್ಲಿ ಮೂಡಿದ್ದ ಭಾರಿ ಹೊಗೆ ಹಾಗೂ ಕೇಳಿಸಿದ ಜೋರು ಶಬ್ದಅನಾಹುತವೊಂದರ ಸುಳಿವು ನೀಡಿತ್ತು. ಹೊರ ಬಂದು ನೋಡುವಾಗಆಕಾಶದಲ್ಲಿ ಎರಡು ಯುದ್ಧ ವಿಮಾನಗಳ ಕಾದಾಟ ಗೋಚರಿಸಿತು.

ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತನೂ ಆಗಿರುವ58 ವಯಸ್ಸಿನ ರಜಾಕ್‌, ನೋಡನೋಡುತ್ತಿದ್ದಂತೆ ಎರಡೂ ವಿಮಾನಗಳಿಗೆ ಬೆಂಕಿ ಹೊತ್ತಿಕೊಂಡಿತು. ಒಂದು ವಿಮಾನ ಗಡಿ ನಿಯಂತ್ರಣ ರೇಖೆಯತ್ತವೇಗವಾಗಿ ಹಾರಿದರೆ ಇನ್ನೊಂದು ಕೆಳಮುಖವಾಗಿ ಬಿದ್ದುಸ್ಫೋಟಗೊಂಡಿತು. ಅದರ ಅವಶೇಷಗಳು ರಜಾಕ್‌ ಅವರ ಮನೆಯಿಂದ ಪೂರ್ವಕ್ಕೆ ಸುಮಾರು ಒಂದು ಕಿ.ಮೀ ದೂರದಲ್ಲಿ ಬಿದ್ದವು. ಆದರೆ ತನ್ನ ಮನೆಯದಕ್ಷಿಣ ದಿಕ್ಕಿನತ್ತ ಒಂದು ಕಿ.ಮೀ ದೂರದಲ್ಲಿ ಪ್ಯಾರಾಚೂಟ್‌ವೊಂದು ಭೂಮಿಯತ್ತ ಇಳಿಯುತ್ತಿರುವುದು ರಜಾಕ್‌ಗೆ ಕಂಡಿತು.

ADVERTISEMENT

ಮುಂದೇನಾಯಿತು ಎಂಬುದಕ್ಕೆ ಸಂಬಂಧಿಸಿದಂತೆ ರಜಾಕ್‌ ಜೊತೆ ಮಾತನಾಡಿ ಪಾಕಿಸ್ತಾನದ ಮಾಧ್ಯಮ ಡಾನ್‌ ಮಾಡಿರುವ ವರದಿ ಇಲ್ಲಿದೆ–

ಪ್ಯಾರಾಚೂಟ್‌ನಿಂದ ಪೈಲಟ್‌ ಸುರಕ್ಷಿತವಾಗಿ ಹೊರಬರುವುದನ್ನು ರಜಾಕ್‌ ನೋಡಿದ್ದಾರೆ.ಇದೇ ವೇಳೆ ಹಳ್ಳಿಯ ಕೆಲವು ಯುವಕರನ್ನು ಕೂಗಿದ ರಜಾಕ್‌, ಸೇನೆಯವರು ಬರುವವರೆಗೆ ಯಾರೊಬ್ಬರೂ ವಿಮಾನದ ಭಗ್ನಾವಶೇಷ ಬಿದ್ದಿರುವಲ್ಲಿಗೆ ಹೋಗದಂತೆ ಹಾಗೂ ಪೈಲಟ್‌ನನ್ನು ಬಿಗಿಯಾಗಿ ಹಿಡಿದುಕೊಳ್ಳುವಂತೆ ಸೂಚಿಸಿದ್ದಾರೆ.

ತಕ್ಷಣಪಿಸ್ತೂಲ್‌ ಹೊರತೆಗೆದ ಪೈಲಟ್‌ ಯುವಕರನ್ನುದ್ದೇಶಿಸಿ ತಾನಿರುವ ಜಾಗ ‘ಭಾರತವೋ? ಪಾಕಿಸ್ತಾನವೋ?’ ಎಂದು ಪ್ರಶ್ನಿಸಿದ್ದಾನೆ. ಅಲ್ಲಿದ್ದವರಲ್ಲೊಬ್ಬ ಇದು ಭಾರತ ಎಂದಿದ್ದಾನೆ. ಆಗ ಆ ‍ಪೈಲಟ್‌ ದೇಶದ ಪರ ಘೋಷಣೆಗಳನ್ನು ಕೂಗಿದ್ದಾರೆ. ಬಳಿಕ ತನ್ನ ಬೆನ್ನಿನ ಮೂಳೆ ಮುರಿದಿದೆ ಎಂದ ಆತ ಕುಡಿಯಲು ನೀರು ಕೇಳಿದ್ದಾನೆ.

ಪೈಲಟ್‌ ಕೂಗಿದಘೋಷಣೆಗಳನ್ನು ಸಹಿಸದ ಕೆಲ ಯುವಕರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಕೆರಳಿದ ಪೈಲಟ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜಗ್ಗದ ಯುವಕರು ಪೈಲಟ್‌ಗೆ ಹೊಡೆಯಲು ಕಲ್ಲುಗಳನ್ನು ಎತ್ತಿಕೊಂಡಿದ್ದಾರೆ.

ರಜಾಕ್‌ ಹೇಳುವಂತೆ, ಪೈಲಟ್‌ ನಿಂತಲ್ಲಿಂದ ಹಿಂದಕ್ಕೆ ತಿರುಗಿಯುವಕರ ಕಡೆಗೆ ಪಿಸ್ತೂಲ್‌ ತೋರಿಸುತ್ತಲೇ ಸುಮಾರು ಅರ್ಧ ಕಿ.ಮೀ ದೂರದವರೆಗೆ ಓಡಿದ್ದಾನೆ. ಹಿಡಿಯಲು ಯುವಕರೂ ಬೆನ್ನಟ್ಟಿದ್ದಾರೆ. ಈ ವೇಳೆ ಇನ್ನೂ ಕೆಲವು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಸಣ್ಣ ಕೊಳದಲ್ಲಿ ಜಿಗಿದ ಪೈಲಟ್‌ ತನ್ನ ಜೇಬಿನಲ್ಲಿಟ್ಟುಕೊಂಡಿದ್ದ ದಾಖಲೆಗಳನ್ನು ನೀರಿನಲ್ಲಿ ನೆನೆಸಿ ನುಂಗಲು ಪ್ರಯತ್ನಿಸಿದ್ದಾನೆ.ಹತ್ತಿರ ಬಂತ ಯುವಕರು ಪಿಸ್ತೂಲ್‌ ಬಿಸಾಡುವಂತೆ ಹೇಳಿದ್ದಾರೆ. ಮಾತನಾಡುತ್ತಲೇ ಪೈಲಟ್‌ ಕಾಲಿಗೆ ಕಲ್ಲು ಬೀಸಿದ್ದಾರೆ.

ಕೊನೆಗೆ ತನ್ನನ್ನು ಕೊಲ್ಲದಂತೆ ಹೇಳಿದ ಪೈಲಟ್‌ ಯುವಕರತ್ತ ಬಂದಿದ್ದಾನೆ. ಯುವಕರುಕೂಡಲೇಆತನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಕೋಪಗೊಂಡಿದ್ದ ಕೆಲವರು ಥಳಿಸಿದ್ದಾರೆ. ಮತ್ತೆ ಕೆಲವರು ಹೊಡೆಯದಂತೆ ತಡೆದಿದ್ದಾರೆ.

ಏತನ್ಮಧ್ಯೆ ಸ್ಥಳಕ್ಕೆ ಬಂದ ಪಾಕಿಸ್ತಾನ ಸೈನಿಕರು ಕೋಪೋದ್ರಿಕ್ತ ಯುವಕರಿಂದಪೈಲಟ್‌ನನ್ನಬಿಡಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಬಳಿಕ ಹೊರ್ರಾ ಗ್ರಾಮದಿಂದ ಸುಮಾರು 50 ಕಿ.ಮೀ ದೂರದ ಭಿಂಬೆರ್‌ನಲ್ಲಿರುವ ಸೇನಾ ಶಿಬಿರಕ್ಕೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಹರ್ಷಭರಿತರಾಗಿದ್ದ ನೂರಾರು ಸಂಖ್ಯೆಯ ಸಾರ್ವಜನಿಕರುಅಲ್ಲಿ ಜಮಾಯಿಸಿದ್ದರು. ಸೇನಾ ವಾಹನದ ಮೇಲೆ ಹೂ ಎರಚಿ ಸ್ವಾಗತಿಸಿದ ಅವರು, ಪಾಕಿಸ್ತಾನ, ಪಾಕಿಸ್ತಾನ ಸೇನೆ, ಕಾಶ್ಮೀರ ಪರ ಘೋಷಣೆಗಳನ್ನು ಕೂಗಿಸಂಭ್ರಮಿಸಿದರು.

ಸೇನಾಧಿಕಾರಿಗಳು ವಿಚಾರಣೆ ನಡೆಸಿದ ಬಳಿಕವೇಗೊತ್ತಾದದ್ದು ಆ ಪೈಲಟ್‌ ವಿಂಗ್‌ ಕಮಾಂಡರ್‌ ಅಭಿನಂದನ್‌ ಎಂಬುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.