ADVERTISEMENT

ಭಾರತೀಯ ಯುವಕರು ಇದಕ್ಕಾಗಿ ಸಾಲ ಮಾಡುತ್ತಾರೆ ಎನ್ನುತ್ತದೆ ಈ ಸಮೀಕ್ಷೆ..

ಪಿಟಿಐ
Published 5 ನವೆಂಬರ್ 2025, 11:23 IST
Last Updated 5 ನವೆಂಬರ್ 2025, 11:23 IST
   

ಮುಂಬೈ: ಭಾರತೀಯ ಯುವಕರಲ್ಲಿ ಸಾಲ ಮಾಡುವ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಲು, ವೃತ್ತಿ ಜೀವನದಲ್ಲಿ ಬೆಳವಣಿಗೆ ಹೊಂದಲು ಹಾಗೂ ಉದ್ಯಮವನ್ನು ಆರಂಭಿಸಲು ಹೆಚ್ಚಿನ ಸಾಲ ಮಾಡುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಡಿಜಿಟಲ್‌ ಸಾಲ ನೀಡುವ ಎಂ ಪಾಕೇಟ್‌ ಈ ಸಮೀಕ್ಷೆ ಮಾಡಿದೆ. 3000 ಭಾರತೀಯ ಯುವಕರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.

ಸಾಲ ಪಡೆದ ಶೇ 63 ರಷ್ಟು ಯುವ ಜನರು ಆರ್ಥಿಕವಾಗಿ ಅಭಿವೃದ್ದಿ ಹೊಂದಿದ್ದಾರೆ. ಶೇ 40 ರಷ್ಟು ಜನರು ಜೀವನದಲ್ಲಿ ಮುಂದೆ ಬರಲು ಸಾಲ ಪಡೆದಿದ್ದಾರೆ. ಅದರಲ್ಲಿ ಶೇ 21.2 ರಷ್ಟು ಜನರು ವೃತ್ತಿ ಜೀವನದಲ್ಲಿ ಬೆಳವಣಿಗೆ ಹೊಂದಲು ಸಾಲ ಮಾಡಿದ್ದಾರೆ. ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಲು ಶೇ 20 ರಷ್ಟು ಜನರು ಹಾಗೂ ಶಿಕ್ಷಣಕ್ಕಾಗಿ ಶೇ 16.5 ರಷ್ಟು ಜನರು ಸಾಲ ಮಾಡಿದ್ದಾರೆ ಎಂದು ವರದಿಯಲ್ಲಿದೆ.

ADVERTISEMENT

ಶೇ. 26.3 ರಷ್ಟು ಜನರು ಆರೋಗ್ಯ ಸೌಲಭ್ಯ ಹಾಗೂ 12.4 ರಷ್ಟು ಮಂದಿ ತುರ್ತು ಸಂದರ್ಭದಲ್ಲಿ ಸಾಲ ಪಡೆದಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

ಇಂದಿನ ಯುವ ಜನರಿಗೆ ಸಾಲ ಮಾಡುವುದು ಅವಲಂಬನೆಯಾಗಿಲ್ಲ, ಅದೊಂದು ಸಾಧ್ಯತೆಯಾಗಿದೆ. ಅವರು ದೀರ್ಘಕಾಲೀನ ಬೆಳವಣಿಗೆಯ ಮೇಲೆ ಕೇಂದ್ರೀಕೃತರಾಗಿದ್ದಾರೆ. ಸಾಲವನ್ನು ಜವಾಬ್ದಾರಿಯುತವಾಗಿ ಬಳಕೆ ಮಾಡಿದರೆ, ಅದು ವೈಯಕ್ತಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.