ADVERTISEMENT

12 ದಶಲಕ್ಷ ಮಂದಿಯನ್ನು ಕಡುಬಡತನಕ್ಕೆ ದೂಡಲಿದೆ ಭಾರತದ ಕೊರೊನಾವೈರಸ್ ಲಾಕ್‌ಡೌನ್‌

ಏಜೆನ್ಸೀಸ್
Published 28 ಮೇ 2020, 16:31 IST
Last Updated 28 ಮೇ 2020, 16:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾವೈರಸ್ ಲಾಕ್‍ಡೌನ್‌ನಿಂದಾಗಿ ಜಗತ್ತಿನಾದ್ಯಂತ 49 ದಶಲಕ್ಷ ಮಂದಿ ಕಡು ಬಡತನ ಅನುಭವಿಸಲಿದ್ದಾರೆ. ಇವರ ಪ್ರತಿದಿನದ ಆದಾಯ 1.90 ಡಾಲರ್‌ಗಿಂತಲೂ ಕಡಿಮೆಯಾಗಲಿದೆ. ಅದೇ ವೇಳೆ ಭಾರತದಲ್ಲಿ ಸರಿಸುಮಾರು 12 ದಶಲಕ್ಷ ಜನರು ಈ ವರ್ಷ ಕಡುಬಡತನದಿಂದ ಸಂಕಷ್ಟಕ್ಕೀಡಾಗಲಿದ್ದಾರೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಮಾಹಿತಿ ಪ್ರಕಾರ ಕಳೆದ ಒಂದು ತಿಂಗಳಲ್ಲಿ ಸುಮಾರು122 ದಶಲಕ್ಷ ಭಾರತೀಯರು ಕೆಲಸವನ್ನು ಬಲವಂತವಾಗಿ ತೊರೆಯಬೇಕಾಗಿ ಬಂದಿದೆ. ದಿನಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಗಳನ್ನು ನಡೆಸುತ್ತಿದ್ದವರ ಮೇಲೆ ಇದು ಲಾಕ್‌ಡೌನ್ ತೀವ್ರ ಪರಿಣಾಮ ಬೀರಿದೆ. ವ್ಯಾಪಾರಿಗಳು, ರಸ್ತೆಬದಿ ವ್ಯಾಪಾರ ನಡೆಸುವವರು, ಕಟ್ಟಡ ನಿರ್ಮಾಣ ಕೆಲಸ ಮಾಡುವವರು ಕೆಲಸ ಕಳೆದುಕೊಂಡು ಜೀವನ ಸಾಗಿಸುವುದಕ್ಕಾಗಿ ಕೈಗಾಡಿ ಮತ್ತು ರಿಕ್ಷಾ ಓಡಿಸಬೇಕಾಗಿ ಬಂದಿದೆ.

2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೇರಿದಾಗ ಭಾರತದಲ್ಲಿರುವ ಕಡು ಬಡವರನ್ನ ಬಡತನದಿಂದ ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದರು. ಎರಡನೇ ಬಾರಿ ಅಧಿಕಾರಕ್ಕೇರಿದಾಗ ಗ್ಯಾಸ್ ಸಿಲಿಂಡರ್, ವಿದ್ಯುತ್ ಮತ್ತು ಮನೆ ನಿರ್ಮಾಣದ ಮಾಡಿಕೊಡುವ ಮೂಲಕ ಜನರ ಶ್ರೇಯಾಭಿವೃದ್ಧಿಗೆ ಪ್ರಯತ್ನಿಸಿದ್ದರು. ಆದರೆ ಇನ್ನು ಮುಂದೆ ದೇಶ ಎದುರಿಸಲಿರುವ ಆರ್ಥಿಕ ಹೊಡೆತವನ್ನು ಸುಧಾರಿಸುವುದು ಅವರಿಗೆ ಕಷ್ಟವಾಗಲಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ADVERTISEMENT

ಬಡತನ ಮುಕ್ತಗೊಳಿಸಲು ಭಾರತ ವರ್ಷಗಳಿಂದ ನಡೆಸುತ್ತಿದ್ದ ಪರಿಶ್ರಮ ಕೆಲವೇ ತಿಂಗಳಲ್ಲಿ ನಿರರ್ಥಕವಾಗಲಿದೆ ಎಂದು ಐಪಿಇ ಗ್ಲೋಬಲ್ ವ್ಯವಸ್ಥಾಪಕ ಅಶ್ವಜಿತ್ ಸಿಂಗ್ ಹೇಳಿದ್ದಾರೆ. ನಿರುದ್ಯೋಗ ದರವು ಆ ಬಾರಿ ಸುಧಾರಿಸುತ್ತದೆ ಎಂದು ನಾನು ನಿರೀಕ್ಷಿಸುತ್ತಿಲ್ಲ, ವೈರಸ್‌ನಿಂದ ಹೆಚ್ಚಾಗಿ ದೇಶದ ಜನರು ಹಸಿವಿನಿಂದ ಸಾಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಯುನೈಟೆಡ್ ನೇಷನ್ಸ್ ಯುನಿವರ್ಸಿಟಿ ಅಧ್ಯಯನ ವರದಿ ಪ್ರಕಾರ 104 ದಶಲಕ್ಷ ಭಾರತೀಯರು ವಿಶ್ವ ಬ್ಯಾಂಕ್ ಹೇಳಿದ ಬಡತನ ರೇಖೆಗಿಂತ ಕೆಳಗೆ ಹೋಗಲಿದ್ದಾರೆ. ಅಂದರೆ ಪ್ರತಿದಿನದ ಆದಾಯ 3.2 ಡಾಲರ್‌ಗಿಂತಲೂ ಕಡಿಮೆ. ಇದರಿಂದಾಗಿ ಬಡತನದಲ್ಲಿ ಬದುಕು ಸಾಗಿಸುವವರ ಸಂಖ್ಯೆ ಶೇ.60 ಅಥವಾ 812 ದಶಲಕ್ಷದಿಂದ ಶೇ.68 ಅಥವಾ 920 ದಶಲಕ್ಷಕ್ಕೆ ತಲುಪಲಿದೆ. ಅಂದರೆ ದೇಶದ ಜನರು ದಶಕಗಳ ಹಿಂದಿನ ಪರಿಸ್ಥಿತಿಗೆ ತಲುಪಲಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಭಾರತವು ಉತ್ತಮ ಸುಧಾರಣೆ ಮಾಡುತ್ತಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದ್ದರೂ ಅತೀ ಹೆಚ್ಚು ಬಡವರನ್ನು ಹೊಂದಿರುವ ದೇಶ ಎಂಬ ಸ್ಥಿತಿಗೆ ಮರಳುವ ಸಾಧ್ಯತೆ ಇದೆ. ಯುನಿನವರ್ಸಿಟಿ ಆಫ್ ಷಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ದಿ ರುಸ್ಟಾಂಡಿ ಸೆಂಟರ್ ಫಾರ್ ಸೋಷ್ಯಲ್ ಸೆಕ್ಟರ್ ಇನ್ನೋವೇಷನ್ ಸಿಎಂಐಇ ತಯಾರಿಸಿದ ನಿರುದ್ಯೋಗದ ದರವನ್ನು ವಿಶ್ಲೇಷಣೆ ಮಾಡಿದೆ. ಏಪ್ರಿಲ್ತಿಂಗಳಲ್ಲಿ ಭಾರತದ 27 ರಾಜ್ಯಗಳಲ್ಲಿರುವ 5,800 ಮನೆಗಳಿಂತ ಮಾಹಿತಿ ಸಂಗ್ರಹಿಸಿತ್ತುಸಿಎಂಐಇ.

ಗ್ರಾಮೀಣ ಪ್ರದೇಶಗಳಲ್ಲಿ ಲಾಕ್‌ಡೌನ್‌ನಿಂದಾಗಿರುವ ಆರ್ಥಿಕ ಹೊಡೆತ ಹೆಚ್ಚು ಪರಿಣಾಮ ಬೀರಲಿದೆ. ಸೋಂಕಿಗಿಂತ ಇದು ಹೆಚ್ಚು ಸಂಕಷ್ಟವನ್ನುಂಟು ಮಾಡಲಿದೆ. ಶೇ.80ಕ್ಕಿಂತ ಹೆಚ್ಚು ಭಾರತೀಯ ಕುಟುಂಬಗಳ ಆದಾಯ ಕುಸಿದಿದ್ದು, ಹಲವಾರು ಜನರಿಗೆ ಬಾಹ್ಯಸಹಾಯ ಇಲ್ಲದೇ ಬದುಕುಳಿಯಲಾರರು ಎಂಬ ಪರಿಸ್ಥಿತಿ ಬಂದಿದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ.

ರೈತರಿಗೆ ಸಾಲ, ನೇರ ಹಣ ವರ್ಗಾವಣೆ ಮಾಡುವುದು ಮತ್ತು ಆಹಾರ ಸುರಕ್ಷತ ಯೋಜನೆಗಳನ್ನು ನೀಡಿದ್ದರೂ ಇದು ದಾಖಲೆಪತ್ರ ಇರುವವರಿಗೆ ಮಾತ್ರ ಸಿಗಲಿದೆ. ಕಡುಬಡತನದಲ್ಲಿರುವವರಿಗೆ ದಾಖಲೆಪತ್ರಗಳು ಇರುವುದಿಲ್ಲ.

ಭಾರತದ ಆರ್ಥಿಕತ ಮಂದಗತಿಯಲ್ಲಿ ಸಾಗುತ್ತಿರುವ ಹೊತ್ತಲ್ಲೇ ವೈರಸ್ ಸೋಂಕು ಕಾಲಿಟ್ಟಿತ್ತು.ಇದರಿಂದಾಗಿ ಮಾರ್ಚ್ 25ರಂದು ಲಾಕ್‍ಡೌನ್ ಘೋಷಿಸಿದ್ದು, ಲಾಕ್‌ಡೌನ್ ಆರ್ಥಿಕತೆ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.