ADVERTISEMENT

ಭಾರತದ ಕೋವಿಡ್-19 ಮರಣ ಪ್ರಮಾಣ ವಿಶ್ವದಲ್ಲಿಯೇ ಅತಿ ಕಡಿಮೆ: ಆರೋಗ್ಯ ಸಚಿವಾಲಯ

ಏಜೆನ್ಸೀಸ್
Published 25 ಆಗಸ್ಟ್ 2020, 13:29 IST
Last Updated 25 ಆಗಸ್ಟ್ 2020, 13:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಕೋವಿಡ್-19 ಮರಣ ಪ್ರಮಾಣವು ವಿಶ್ವದ ಅತ್ಯಂತ ಕಡಿಮೆ ಪ್ರಮಾಣಗಳಲ್ಲಿ ಒಂದಾಗಿದ್ದು, ಶೇ 1.58 ರಷ್ಟಿದೆ ಮತ್ತು ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು ಕೇವಲ ಶೇ 22.2 ರಷ್ಟು ಮಾತ್ರ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳಿಗಿಂತ 3.4 ಪಟ್ಟು ಹೆಚ್ಚಾಗಿದೆ ಮತ್ತು ಚೇತರಿಕೆ ಪ್ರಮಾಣವು ಶೇ 75 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್-19 ಮರಣ ಪ್ರಮಾಣವು ಶೇ 1.58ರಷ್ಟಿದೆ, ವಿಶ್ವದ ಅತ್ಯಂತ ಕಡಿಮೆ ಪ್ರಮಾಣಗಳಲ್ಲಿ ಒಂದಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,400ರಷ್ಟು ಕಡಿಮೆಯಾಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳ ಪೈಕಿ ಕೇವಲ ಶೇ 22.2ರಷ್ಟಿದೆ. ಆಗಸ್ಟ್ 25ರ ಹೊತ್ತಿಗೆ ದೇಶದಲ್ಲಿ 3.68 ಕೋಟಿ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ADVERTISEMENT

ಏಳು ದಿನಗಳ ರೋಲಿಂಗ್ ಸರಾಸರಿಯ ಆಧಾರದ ಮೇಲೆ ಸಕಾರಾತ್ಮಕ ಪ್ರಕರಣಗಳು ಆಗಸ್ಟ್ ಮೊದಲ ವಾರದಲ್ಲಿ ಶೇ 11 ರಷ್ಟಿತ್ತು. ಆದರೆ ಈಗ ಅದು ಶೇ 8ಕ್ಕೆ ಇಳಿದಿದೆ. ಮಾದರಿ ಪರೀಕ್ಷೆಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದರೂ ಕೂಡ, ಕೋವಿಡ್-19 ಸಕಾರಾತ್ಮಕ ದರದಲ್ಲಿ ಸ್ಥಿರ ಕುಸಿತವಿದೆ ಎಂದು ಅವರು ಹೇಳಿದರು.

ದಿನಕ್ಕೆ ಮಿಲಿಯನ್‌ಗೆ ಪರೀಕ್ಷೆಗಳ ಭಾಗವಾಗಿ ಪರೀಕ್ಷೆಗಳು ಕ್ರಮೇಣ ಹೆಚ್ಚುತ್ತಿವೆ. ದಿನಕ್ಕೆ ಮಿಲಿಯನ್ ಪರೀಕ್ಷೆಯಂತೆ ದಿನವೊಂದಕ್ಕೆ 363 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಅದೀಗ 600ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.