ADVERTISEMENT

ಕೋವಿಡ್ ಮೂರನೇ ಅಲೆ ಎದುರಿಸಲು ವೈದ್ಯಕೀಯ ಮೂಲಸೌಕರ್ಯ ಸಿದ್ಧ: ನಿರ್ಮಲಾ ಸೀತಾರಾಮನ್

ಪಿಟಿಐ
Published 2 ಜುಲೈ 2021, 1:20 IST
Last Updated 2 ಜುಲೈ 2021, 1:20 IST
ನಿರ್ಮಲಾ ಸೀತಾರಾಮನ್ (ಪಿಟಿಐ ಸಂಗ್ರಹ ಚಿತ್ರ)
ನಿರ್ಮಲಾ ಸೀತಾರಾಮನ್ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ದೇಶದಲ್ಲಿ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲಾಗಿದ್ದು, ಕೋವಿಡ್ ಮೂರನೇ ಅಲೆ ನಿಭಾಯಿಸಲು ಅದು ಸನ್ನದ್ಧವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

‘ಇಂಡಿಯಾ ಗ್ಲೋಬಲ್ ಫೋರಂ’ನಲ್ಲಿ ಮಾತನಾಡಿದ ಅವರು, ‘ಆದಾಯ ಸಂಗ್ರಹದಲ್ಲಿ ವೃದ್ಧಿಯಾಗಿರುವುದು ವೈದ್ಯಕೀಯ ಮೂಲಸೌಕರ್ಯ ಹೆಚ್ಚಳಕ್ಕೆ ನೆರವಾಗಲಿದೆ. ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದರ ಜತೆಗೆ ಸರ್ಕಾರದ ಯೋಜಿತ ಖಾಸಗೀಕರಣಕ್ಕೆ ಚಾಲನೆ ಪ್ರಕ್ರಿಯೆಯೂ ಸಹಜವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಯಾರೂ ಮೂರನೇ ಅಲೆ ಬರಲಿ ಎಂದು ಬಯಸುವುದಿಲ್ಲ. ಆದರೆ ಅದನ್ನು ಗಮನದಲ್ಲಿಟ್ಟುಕೊಂಡು ನಾವು ಮೂಲಸೌಕರ್ಯ, ವೈದ್ಯಕೀಯ ಮೂಲಸೌಕರ್ಯಗಳ ಹೆಚ್ಚಳಕ್ಕೆ ಒತ್ತು ನೀಡಿದ್ದೇವೆ. ಮೆಟ್ರೊಪಾಲಿಟನ್ ನಗರಗಳಲ್ಲಿ ಮಾತ್ರವಲ್ಲದೆ ಎರಡು ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿ ವೈದ್ಯಕೀಯ ಮೂಲಸೌಕರ್ಯ ಸುಧಾರಿಸಲು ನಾವು ವಿಭಿನ್ನ ಕ್ರಮಗಳನ್ನು ಘೋಷಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಜನ ಸಂಖ್ಯೆಯನ್ನು ಮತ್ತು ಮಕ್ಕಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಆಯಾ ಪ್ರದೇಶಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಹೆಚ್ಚಳ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಮೂರನೇ ಅಲೆ ಬಾರದೇ ಇರಲಿ. ಒಂದು ವೇಳೆ ಬಂದರೆ ನಮ್ಮ ವೈದ್ಯಕೀಯ ಮೂಲಸೌಕರ್ಯ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಳೆದ ವಾರ ನಿರ್ಮಲಾ ಸೀತಾರಾಮನ್ ಮತ್ತೊಂದು ಆರ್ಥಿಕ ‍ಪ್ಯಾಕೇಜ್ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.