ADVERTISEMENT

ಕೋವಿಡ್ ಪಿಡುಗು ಬರುವುದಕ್ಕೂ ಮೊದಲಿನ ಸ್ಥಿತಿಗೆ ಮರಳಿದ ವಿದ್ಯುತ್ ಬಳಕೆ

ಪಿಟಿಐ
Published 11 ಜುಲೈ 2021, 10:41 IST
Last Updated 11 ಜುಲೈ 2021, 10:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದ ವಿದ್ಯುತ್‌ ಬಳಕೆಯು ಜುಲೈ ಮೊದಲ ವಾರದಲ್ಲಿ ಶೇಕಡ 18ರಷ್ಟು ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ವಿದ್ಯುತ್‌ ಬಳಕೆಯು ಕೋವಿಡ್‌ ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ಮರಳಿದೆ.

ಈ ವರ್ಷ ಜುಲೈ ಮೊದಲ ವಾರದಲ್ಲಿ 30.33 ಶತಕೋಟಿ ಯೂನಿಟ್ ವಿದ್ಯುತ್‌ ಬಳಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 25.72 ಬಿಯು ಮತ್ತು 2019ರಲ್ಲಿ 26.63 ಶತಕೋಟಿ ಯೂನಿಟ್ ವಿದ್ಯುತ್‌ ಬಳಕೆಯಾಗಿತ್ತು.

‘ಜುಲೈ ಮೊದಲ ವಾರದಲ್ಲಿ ರಾಜ್ಯಗಳು ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಿದವು. ಇದರಿಂದಾಗಿ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾದ್ದವು. ಅಲ್ಲದೆ ಮುಂಗಾರು ಮಳೆಯೂ ತಡವಾಗಿ ಆಗಮಿಸಿತು. ವಿದ್ಯುತ್‌ ಬಳಕೆ ಏರಿಕೆಗೆ ಇವೆರಡು ಪ್ರಮುಖ ಕಾರಣಗಳು. ವಿದ್ಯುತ್‌ ಬಳಕೆಯ ಈ ಸನ್ನಿವೇಶ ಗಮನಿಸಿದರೆ ಕೋವಿಡ್‌ ನಂತರದ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಪರಿಸ್ಥಿತಿಯ ಚೇತರಿಕೆ ಆಗುವುದು ನಿಶ್ಚಿತ’ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.