ADVERTISEMENT

ರಷ್ಯಾ ತೈಲ ಖರೀದಿ: ಭಾರತದ ಕ್ರಮದಿಂದ ಅಮೆರಿಕಕ್ಕೆ ತೊಂದರೆ ಇಲ್ಲ -ಜೆಫ್ರಿ ಪ್ಯಾಟ್

ಪಿಟಿಐ
Published 17 ಫೆಬ್ರುವರಿ 2023, 14:00 IST
Last Updated 17 ಫೆಬ್ರುವರಿ 2023, 14:00 IST
ಜೆಫ್ರಿ ಪ್ಯಾಟ್
ಜೆಫ್ರಿ ಪ್ಯಾಟ್   

ನವದೆಹಲಿ: ‘ಭಾರಿ ಚೌಕಾಶಿ ಮೂಲಕ ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಖರೀದಿ ಮಾಡುವ ಭಾರತದ ನಿರ್ಧಾರದಿಂದ ಅಮೆರಿಕಕ್ಕೆ ಯಾವುದೇ ತೊಂದರೆ ಇಲ್ಲ' ಎಂದು ಅಧ್ಯಕ್ಷ ಜೊ ಬೈಡನ್‌ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಇಂಧನ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯದರ್ಶಿ ಜೆಫ್ರಿ ಆರ್‌.ಪ್ಯಾಟ್‌, ‘ತನ್ನ ಇಂಧನ ಭದ್ರತೆಗೆ ಸಂಬಂಧಿಸಿ ಭಾರತ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಅಧ್ಯಕ್ಷ ಜೊ ಬೈಡನ್‌ ಆಡಳಿತಕ್ಕೆ ತೃಪ್ತಿ ಇದೆ’ ಎಂದಿದ್ದಾರೆ.

‘ತೈಲ ಮಾರಾಟದಿಂದ ರಷ್ಯಾಕ್ಕೆ ಸಿಗುತ್ತಿರುವ ಆದಾಯದಲ್ಲಿ ಇಳಿಕೆಯಾಗಬೇಕು ಎಂಬುದು ಜಿ–7 ಗುಂಪಿನ ರಾಷ್ಟ್ರಗಳ ನೀತಿಯಾಗಿದೆ. ಈಗ, ಕಡಿಮೆ ಬೆಲೆಯಲ್ಲಿಯೇ ರಷ್ಯಾ ತೈಲವನ್ನು ಖರೀದಿ ಮಾಡುತ್ತಿರುವ ಭಾರತದ ನಡೆ ನಮ್ಮ ಈ ನೀತಿಗೆ ಪೂರಕವಾಗಿಯೇ ಇದೆ’ ಎಂದು ಪ್ಯಾಟ್‌ ಹೇಳಿದ್ದಾರೆ.

ADVERTISEMENT

ರಷ್ಯಾ ತೈಲ ಖರೀದಿಯನ್ನು ಹೆಚ್ಚಿಸುತ್ತಿರುವ ಭಾರತದ ಕ್ರಮದ ಬಗ್ಗೆ ಬೈಡನ್‌ ಆಡಳಿತವು ಇದೇ ಮೊದಲ ಬಾರಿಗೆ ತನ್ನ ಸ್ಪಷ್ಟ ನಿಲುವು ಹೊರಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.