ಮುಂಬೈ: ಕೋಲ್ಕತ್ತ ವಿಮಾನದಲ್ಲಿ ಶುಕ್ರವಾರ ಸಹಪ್ರಯಾಣಿಕನ ಕಪಾಳಕ್ಕೆ ಹೊಡೆದ ಪ್ರಯಾಣಿಕನಿಗೆ, ಇನ್ನು ಮುಂದೆ ತನ್ನ ವಿಮಾನಗಳಲ್ಲಿ ಸಂಚರಿಸದಂತೆ ಇಂಡಿಗೊ ನಿಷೇಧ ಹೇರಿದೆ
ಇಂಡಿಗೊ 6ಇ138 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಆರೋಪಿಯು ಇಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಈತ ಅಶಿಸ್ತಿನಿಂದ ವರ್ತಿಸಿದ್ದಾನೆ ಎಂದು ಇದೀಗ ಘೋಷಿಸಲಾಗಿದೆ.
‘ಇಂಡಿಗೊದ ಯಾವುದೇ ವಿಮಾನದಲ್ಲಿ ಆರೋಪಿಯು ಸಂಚರಿಸುವುದನ್ನು ನಿಷೇಧಿಸಲಾಗಿದೆ’ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.