ADVERTISEMENT

IndiGo Crisis: ವಿಮಾನ ಟಿಕೆಟ್ ದರಕ್ಕೆ ಕೇಂದ್ರ ಸರ್ಕಾರದಿಂದ ಮಿತಿ

ಪಿಟಿಐ
Published 6 ಡಿಸೆಂಬರ್ 2025, 11:22 IST
Last Updated 6 ಡಿಸೆಂಬರ್ 2025, 11:22 IST
<div class="paragraphs"><p>ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ವಿಮಾನ ಹಾರಾಟದ ಸ್ಥಿತಿಗತಿ ಕುರಿತಂತೆ ಮಾಹಿತಿ ಪಡೆಯಲು ಇಂಡಿಗೊ ಏರ್‌ಲೈನ್ಸ್‌ನ ಕಿಯೊಸ್ಕ್‌ ಮುಂದೆ ಸೇರಿದ್ದ ಪ್ರಯಾಣಿಕರು</p></div>

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ವಿಮಾನ ಹಾರಾಟದ ಸ್ಥಿತಿಗತಿ ಕುರಿತಂತೆ ಮಾಹಿತಿ ಪಡೆಯಲು ಇಂಡಿಗೊ ಏರ್‌ಲೈನ್ಸ್‌ನ ಕಿಯೊಸ್ಕ್‌ ಮುಂದೆ ಸೇರಿದ್ದ ಪ್ರಯಾಣಿಕರು

   

–‍  ಪಿಟಿಐ ಚಿತ್ರ

ನವದೆಹಲಿ: ವಿಮಾನ ಪ್ರಯಾಣ ದರಕ್ಕೆ ಕೇಂದ್ರ ಸರ್ಕಾರ ಶನಿವಾರ ಮಿತಿ ಹೇರಿದೆ. ಇಂಡಿಗೊ ವಿಮಾನ ಸೇವೆ ವ್ಯತ್ಯಯದಿಂದ ಇತರ ವಿಮಾನ ಸಂಸ್ಥೆಗಳು ಟಿಕೆದ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ADVERTISEMENT

ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ‘ಇಂಡಿಗೊ’ದ ಕಾರ್ಯಾಚರಣೆ ಸತತ ಐದು ದಿನಗಳಿಂದ ವ್ಯತ್ಯಯವಾಗಿದೆ. ಸಾವಿರಾರು ವಿಮಾನ ಸೇವೆ ರದ್ದುಗೊಂಡಿದೆ.

ಹಲವು ಮಾರ್ಗಗಳಲ್ಲಿ ವಿಮಾನ ಸಂಖ್ಯೆ ಕಡಿಮೆ ಇದ್ದಿದ್ದರಿಂದ. ಇತರೆ ಸಂಸ್ಥೆಗಳು ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದವು.

ಇದನ್ನು ಗಂಭೀರವಾಗಿ ಪರಿಗಣಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ತನ್ನ ನಿಯಂತ್ರಕ ಅಧಿಕಾರಗಳನ್ನು ಬಳಸಿ ನ್ಯಾಯಯುತ ಮತ್ತು ಸಮಂಜಸವಾದ ದರ ವಿಧಿಸುವಂತೆ ನಿರ್ದೇಶಿಸಿದೆ.

ಸದ್ಯದ ಪರಿಸ್ಥಿತಿ ತಿಳಿಗೊಳ್ಳುವವರೆಗೂ ಈ ನಿಯಂತ್ರಕ ಕ್ರಮ ಜಾರಿಯಲ್ಲಿರಲಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ವಿಮಾನ ಟಿಕೆಟ್ ದರಕ್ಕೆ ಹೇರಿರುವ ಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.