ADVERTISEMENT

ಋಷಿಕೇಶ | ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ: 186 ಪ್ರಯಾಣಿಕರು ಸುರಕ್ಷಿತ

ಪಿಟಿಐ
Published 24 ನವೆಂಬರ್ 2025, 2:12 IST
Last Updated 24 ನವೆಂಬರ್ 2025, 2:12 IST
   

ಋಷಿಕೇಶ: ಮುಂಬೈನಿಂದ 186 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನಕ್ಕೆ ಋಷಿಕೇಶ ಸಮೀಪದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ರನ್‌ವೇನಲ್ಲಿ ಹಕ್ಕಿ ಡಿಕ್ಕಿಯಾಗಿ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದೈವವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.

ಇಂಡಿಗೊ ವಿಮಾನ ಐಜಿಒ 5032ದ ಮುಂಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ಭಾನುವಾರ ಸಂಜೆ 6.45ರ ವೇಳೆಗೆ ಘಟನೆ ನಡೆದಿದೆ. ರನ್‌ವೇಯಲ್ಲಿ ಲ್ಯಾಂಡ್ ಆದ ಕೂಡಲೇ ಘಟನೆ ಸಂಭವಿಸಿದೆ.

ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದು, ರನ್‌ವೇಯ ಸುರಕ್ಷತೆ ಬಗ್ಗೆ ಪರಿಶೋಧನೆ ನಡೆಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.