ADVERTISEMENT

10ನೇ ದಿನಕ್ಕೆ ಕಾಲಿಟ್ಟ ಇಂಡಿಗೊ ಬಿಕ್ಕಟ್ಟು: ಬೆಂಗಳೂರಲ್ಲಿ 61ವಿಮಾನ ಹಾರಾಟ ರದ್ದು

ಪಿಟಿಐ
Published 10 ಡಿಸೆಂಬರ್ 2025, 9:32 IST
Last Updated 10 ಡಿಸೆಂಬರ್ 2025, 9:32 IST
ಇಂಡಿಗೊ ವಿಮಾನ (ಸಾಂದರ್ಭಿಕ ಚಿತ್ರ)
ಇಂಡಿಗೊ ವಿಮಾನ (ಸಾಂದರ್ಭಿಕ ಚಿತ್ರ)   

ನವದೆಹಲಿ: ಇಂಡಿಗೊ ವಿಮಾನಗಳ ಸಂಚಾರದಲ್ಲಿ ಉಂಟಾಗಿರುವ ವ್ಯತ್ಯಯವು ಇಂದು (ಬುಧವಾರ) 10ನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮತ್ತು ಇಲ್ಲಿಂದ ಹೊರಡಬೇಕಿದ್ದ 61 ವಿಮಾನಗಳ ಹಾರಾಟ ರದ್ದಾಗಿದೆ.

ಬೆಂಗಳೂರಿಗೆ ಬರಬೇಕಿದ್ದ 35 ಮತ್ತು ಇಲ್ಲಿಂದ ಹೊರಡಬೇಕಿದ್ದ 26 ವಿಮಾನಗಳ ಕಾರ್ಯಾಚರಣೆ ರದ್ದು ಮಾಡಲಾಗಿದೆ. ಸಹಾಯ ಕೇಂದ್ರ ಬಳಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿದೆ.

ವಿಮಾನಗಳ ಹಾರಾಟವು ಸಾಮಾನ್ಯ ಸ್ಥಿತಿಗೆ ಮರಳಿದೆ. ಸಮಸ್ಯೆಗೆ ಒಳಗಾದ ಗ್ರಾಹಕರ ಅಗತ್ಯವನ್ನೂ ಪೂರೈಸಲಾಗುತ್ತಿದೆ ಎಂದು ಇಂಡಿಗೊ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಹೇಳಿದ್ದರೂ ಕೂಡ ಸಮಸ್ಯೆ ಹಾಗೆಯೇ ಮುಂದುವರಿದಿದೆ.

ADVERTISEMENT

ವಿಮಾನಗಳ ಹಾರಾಟ ರದ್ದಾದ ಕಾರಣ ಬೆಂಗಳೂರು, ಅಹಮದಾಬಾದ್ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.

ಇಂಡಿಗೊ ವಿಮಾನಯಾನ ಸಂಸ್ಥೆಯು ತನ್ನ ಒಟ್ಟು ವಿಮಾನಗಳ ಹಾರಾಟಗಳಲ್ಲಿ ಶೇ 10ರಷ್ಟು ಹಾರಾಟವನ್ನು ಕಡಿತ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರು ಮಂಗಳವಾರ ಸೂಚಿಸಿದ್ದರು.

‘ಚಳಿಗಾಲದಲ್ಲಿ ಹಾರಾಟ ನಡೆಸುವ ಮಾರ್ಗಗಳಲ್ಲಿ ಶೇ 5ರಷ್ಟು ವಿಮಾನಗಳ ಹಾರಾಟವನ್ನು ಕಡಿತ ಮಾಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶ ನಾಲಯವು (ಡಿಜಿಸಿಎ) ಇಂಡಿಗೊ ಸಂಸ್ಥೆಗೆ ಸೋಮವಾರ ಸೂಚನೆ ನೀಡಿತ್ತು. ವಿಮಾನಗಳ ಹಾರಾಟವನ್ನು ಕಡಿತ ಮಾಡಿದ ಬಳಿಕ, ಪರಿಷ್ಕೃತ ವೇಳಾಪಟ್ಟಿಯನ್ನು ಬುಧವಾರದ (ಡಿ.10) ಒಳಗೆ ನೀಡಬೇಕು ಎಂದೂ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.