ADVERTISEMENT

ಅ.26ರಿಂದ ಕೋಲ್ಕತ್ತ–ಗುವಾಂಗ್‌ಝೌ ಇಂಡಿಗೊ ನೇರ ವಿಮಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 15:56 IST
Last Updated 2 ಅಕ್ಟೋಬರ್ 2025, 15:56 IST
<div class="paragraphs"><p>&nbsp;ಇಂಡಿಗೊ ವಿಮಾನ</p></div>

 ಇಂಡಿಗೊ ವಿಮಾನ

   

ನವದೆಹಲಿ: ಕೋಲ್ಕತ್ತದಿಂದ ಚೀನಾದ ಗುವಾಂಗ್‌ಝೌ ನಗರಕ್ಕೆ ಅಕ್ಟೋಬರ್‌ 26ರಿಂದ ನೇರ ವಿಮಾನ ಸಂಚಾರವನ್ನು ಪುನರಾರಂಭಿಸುವುದಾಗಿ ಇಂಡಿಗೊ ವಿಮಾನಯಾನ ಸಂಸ್ಥೆ ಹೇಳಿದೆ. 

2020ಕ್ಕೂ ಮುನ್ನ ಕೋಲ್ಕತ್ತ– ಗುವಾಂಗ್‌ಝೌ ನಗರದ ನಡುವೆ ಇಂಡಿಗೊ ನೇರ ವಿಮಾನ ಸೇವೆ ಒದಗಿಸುತ್ತಿತ್ತು. ಕೋವಿಡ್‌ ನಂತರ ಮತ್ತು ಪೂರ್ವ ಲಡಾಖ್‌ನ ಗಡಿ ಸಮಸ್ಯೆ ಉದ್ಭವವಾದ ಬೆನ್ನಲ್ಲೇ ಈ ಸಂಚಾರ ಸ್ಥಗಿತಗೊಂಡಿತ್ತು. 

ADVERTISEMENT

ನಾಗರಿಕ ವಿಮಾನಯಾನ ಸಚಿವಾಲಯವು ಅನುಮತಿ ನೀಡಿದ ಬಳಿಕ ದೆಹಲಿಯಿಂದಲೂ ಗುವಾಂಗ್‌ಝೌ ನಗರಕ್ಕೆ ನೇರ ವಿಮಾನ ಸೇವೆ ಆರಂಭಿಸುವ ಯೋಜನೆಯನ್ನೂ ಇಂಡಿಗೊ ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.