ADVERTISEMENT

Republic Day: ಕರ್ತವ್ಯಪಥದಲ್ಲಿ ಪ‌ಥಸಂಚಲನಕ್ಕೆ ಸಾಕ್ಷಿಯಾದ ಇಂಡೋನೇಷ್ಯಾ ಅಧ್ಯಕ್ಷ

ಪಿಟಿಐ
Published 26 ಜನವರಿ 2025, 6:09 IST
Last Updated 26 ಜನವರಿ 2025, 6:09 IST
<div class="paragraphs"><p>ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ&nbsp;ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ</p></div>

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ

   

ಚಿತ್ರಕೃಪೆ: ಪಿಟಿಐ (@PresidentOfIndia)

ನವದೆಹಲಿ: ದೇಶದ 76ನೇ ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಪಥಸಂಚಲನವನ್ನು ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ವೀಕ್ಷಿಸಿದರು.

ADVERTISEMENT

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಸುಬಿಯಾಂತೊ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ವಿದೇಶಗಳ ರಾಜತಾಂತ್ರಿಕರು ಮತ್ತು ಇತರ ಗಣ್ಯರೊಂದಿಗೆ ಮಿಲಿಟರಿ ಪರೇಡ್‌ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾಕ್ಷಿಯಾದರು.

ಇಂಡೋನೇಷ್ಯಾದ ಮಾಜಿ ರಕ್ಷಣಾ ಸಚಿವರೂ ಆಗಿರುವ ಸುಬಿಯಾಂಟೊ, ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಆ ದೇಶದ (ಇಂಡೋನೇಷ್ಯಾ) ನಾಲ್ಕನೇ ಅಧ್ಯಕ್ಷರಾಗಿದ್ದಾರೆ. ಇಂಡೋನೇಷ್ಯಾದ ಮೊದಲ ಅಧ್ಯಕ್ಷ ಸುಕರ್ನೊ ಅವರು 1950 ರಲ್ಲಿ ಮುಖ್ಯ ಅತಿಥಿಯಾಗಿದ್ದರು.

ಇಂಡೋನೇಷ್ಯಾದ 352 ಸದಸ್ಯರ ಪಥಸಂಚಲನ ಹಾಗೂ ಬ್ಯಾಂಡ್‌ ತಂಡವೂ, ಪರೇಡ್‌ನಲ್ಲಿ ಪಾಲ್ಗೊಂಡಿತು. ವಿದೇಶದ ರಾಷ್ಟ್ರೀಯ ಸಮಾರಂಭದಲ್ಲಿ ಇಂಡೋನೇಷ್ಯಾದ ತಂಡ ಭಾಗವಹಿಸಿದ್ದು ಇದೇ ಮೊದಲು.

ಭಾರತವು, ಗಣರಾಜ್ಯೋತ್ಸವ ಸಮಾರಂಭಕ್ಕೆ ಪ್ರತಿವರ್ಷವೂ ವಿದೇಶಿ ಗಣ್ಯರನ್ನು ಆಹ್ವಾನಿಸುತ್ತದೆ.

ಕಳೆದ ವರ್ಷ ಪ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುವೆಲ್‌ ಮ್ಯಾಕ್ರನ್‌ ಮುಖ್ಯ ಅತಿಥಿಯಾಗಿದ್ದರು. 2023ರಲ್ಲಿ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತಾಹ್‌ ಅಲ್‌–ಸಿಸಿ ಬಂದಿದ್ದರು.

ಕೋವಿಡ್‌–19 ಸಂಕ್ರಾಮಿಕದ ಕಾರಣದಿಂದಾಗಿ 2021–22ರಲ್ಲಿ, ವಿದೇಶಿ ಗಣ್ಯರು ಭಾಗವಹಿಸಿರಲಿಲ್ಲ.

ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಅವರು 2015ರಲ್ಲಿ ಮುಖ್ಯ ಅತಿಥಿಯಾಗಿದ್ದರು.

ರಕ್ಷಣಾ ಸಹಕಾರ
ಉಭಯ ದೇಶಗಳ ನಡುವಣ ರಕ್ಷಣಾ ಸಹಕಾರವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹಾಗೂ ಸುಬಿಯಾಂತೊ ಅವರು ಶನಿವಾರ ಮಾತುಕತೆ ನಡೆಸಿದ್ದಾರೆ. ರಕ್ಷಣಾ ಸಾಧನಗಳ ಉತ್ಪಾದನೆ ಹಾಗೂ ಅವುಗಳ ಪೂರೈಕೆಯನ್ನು ವೃದ್ಧಿಸುವ ಸಂಬಂಧ ಚರ್ಚೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.