ADVERTISEMENT

ಮೂಲಸೌಕರ್ಯಗಳ ಗುಣಟ್ಟದಲ್ಲಿ ರಾಜಿಯಿಲ್ಲ: ನಿತಿನ್ ಗಡ್ಕರಿ

ಪಿಟಿಐ
Published 13 ಅಕ್ಟೋಬರ್ 2025, 16:15 IST
Last Updated 13 ಅಕ್ಟೋಬರ್ 2025, 16:15 IST
<div class="paragraphs"><p>ನಿತಿನ್ ಗಡ್ಕರಿ (ಪಿಟಿಐ ಚಿತ್ರ)</p></div>

ನಿತಿನ್ ಗಡ್ಕರಿ (ಪಿಟಿಐ ಚಿತ್ರ)

   

ಪುದುಚೇರಿ: ಮೂಲಸೌಕರ್ಯಗಳ ಗುಣಮಟ್ಟ ಮತ್ತು ಸರಿಯಾದ ವಿನ್ಯಾಸದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.

ಯೋಜನೆಗಳು ಪಾರದರ್ಶಕವಾಗಿ, ಕಾಲಮಿತಿಯೊಳಗೆ, ಭ್ರಷ್ಟಾಚಾರ ರಹಿತವಾಗಿ ಮತ್ತು ಫಲಿತಾಂಶ ಆಧಾರಿತವಾಗಿ ಕಾರ್ಯಗತಗೊಳ್ಳಬೇಕು ಎಂದು ತಮ್ಮ ಸರ್ಕಾರ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

₹436 ಕೋಟಿ ವೆಚ್ಚದ ಎಲಿವೇಟೆಡ್ ಕಾರಿಡಾರ್ ಹಾಗೂ ಗ್ರೇಡ್ ಸಪರೇಟರ್‌ಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ‘ಈ ಯೋಜನೆಯು ಪುದುಚೇರಿಯ ಅಭಿವೃದ್ಧಿಗೆ ಗಮನಾರ್ಹ ಉತ್ತೇಜನ ನೀಡುತ್ತದೆ’ ಎಂದು ಹೇಳಿದ್ದಾರೆ.

ದೇಶದಾದ್ಯಂತ ತ್ವರಿತ ಮತ್ತು ವಿಶಾಲವಾದ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ ಎಂದು ಗಡ್ಕರಿ ಹೇಳಿದ್ದು, ತಮ್ಮ ಇಲಾಖೆಯು ಪುದುಚೇರಿಯ ರಸ್ತೆಗಳು, ಸೇತುವೆಗಳು ಮತ್ತು ಇತರ ಸೌಕರ್ಯಗಳಿಗಾಗಿ ₹25,000 ಕೋಟಿ ವೆಚ್ಚ ಮಾಡಲು ಯೋಜಿಸಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.