ADVERTISEMENT

ವಾಯು ಪ್ರದೇಶ ಬಳಕೆ ನಿರಾಕರಣೆ: ಐಸಿಎಒನಲ್ಲಿ ಪಾಕ್‌ ಕ್ರಮ ಪ್ರಶ್ನಿಸಲಿದೆ ಭಾರತ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 7:22 IST
Last Updated 28 ಅಕ್ಟೋಬರ್ 2019, 7:22 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ವಾಯು ಪ್ರದೇಶ ಬಳಕೆಗೆ ನಿಷೇಧ ವಿಧಿಸಿದ ಪಾಕಿಸ್ತಾನದ ಕ್ರಮವನ್ನು ಭಾರತವು ಅಂತರರಾಷ್ಟ್ರೀಯ ನಾಗರಿಕ ವಿಮಾನ ಸಂಸ್ಥೆಯಲ್ಲಿ (ಐಸಿಎಒ) ಪ್ರಶ್ನಿಸಲು ನಿರ್ಧರಿಸಿದೆ.

ಸೌದಿ ಅರೇಬಿಯಾಕ್ಕೆ ತೆರಳುವ ಸಲುವಾಗಿ ಪಾಕಿಸ್ತಾನದ ವಾಯು ಪ್ರದೇಶ ಬಳಕೆಗೆ ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರಪಾಕಿಸ್ತಾನವನ್ನು ಕೋರಿತ್ತು. ಆದರೆ, ಪ್ರಧಾನಿ ಮೋದಿಯವರಿಗೆ ತನ್ನ ವಾಯು ಪ್ರದೇಶದಲ್ಲಿ ಪ್ರಯಾಣಿಸಲು ಅನುಮತಿ ನಿರಾಕರಿಸಿರುವ ಬಗ್ಗೆ ಅಲ್ಲಿನ ವಿದೇಶಾಂಗ ಸಚಿವ ಶಾ ಮೆಹ್ಮದ್‌ ಕುರೈಷಿ ಅವರು ಭಾನುವಾರ ಭಾರತೀಯ ಹೈ ಕಮಿಷನ್‌ಗೆ ಪತ್ರ ಬರೆದಿದ್ದರು.

ಪಾಕ್ತನ್ನ ನಿರ್ಧಾರದ ಮೂಲಕ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯನಿಯಮವಳಿಗಳನ್ನು ಗಾಳಿಗೆ ತೂರಿದೆ. ಪಾಕಿಸ್ತಾನದ ಈ ನಿರ್ಧಾರ ಬಗ್ಗೆಭಾರತ ಬೇಸರ ವ್ಯಕ್ತಪಡಿಸುತ್ತಿದೆ. ಅಲ್ಲದೇ ಪಾಕಿಸ್ತಾನವು ತನ್ನ ಹಳೆಯ ಚಾಳಿಯನ್ನು ಮುಂದುವರೆಸುವ ಮೂಲಕ ಏಕಪಕ್ಷೀಯ ನಿರ್ಧಾರ ತಾಳುತ್ತಿದೆ ಎಂದು ಭಾರತ ಆರೋಪಿಸಿದೆ.

ADVERTISEMENT

ಅಂತರರಾಷ್ಟ್ರೀಯ ನಾಗರಿಕ ವಿಮಾನ ಸಂಸ್ಥೆಯ ನಿಯಮದ ಪ್ರಕಾರ, ಗಣ್ಯ ವ್ಯಕ್ತಿಗಳಿಗೆ ಯಾವುದೇ ದೇಶ ತನ್ನವಾಯು ಪ್ರದೇಶ ಬಳಸಲು ಅವಕಾಶ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.