ADVERTISEMENT

ಹರಿಯಾಣ: ನವೆಂಬರ್ 15 ರಿಂದ 10 ನೇ ಆವೃತ್ತಿಯ ‘ಅಂತರರಾಷ್ಟ್ರೀಯ ಗೀತಾ ಮಹೋತ್ಸವ’

ಪಿಟಿಐ
Published 28 ಸೆಪ್ಟೆಂಬರ್ 2025, 11:08 IST
Last Updated 28 ಸೆಪ್ಟೆಂಬರ್ 2025, 11:08 IST
ಭಗವದ್ಗೀತೆ
ಭಗವದ್ಗೀತೆ   

ಚಂಡೀಗಢ: ‘10 ನೇ ಆವೃತ್ತಿಯ ಅಂತರರಾಷ್ಟ್ರೀಯ ಗೀತಾ ಮಹೋತ್ಸವ’ ಕಾರ್ಯಕ್ರಮ (IGM-2025) ನವೆಂಬರ್ 15 ರಿಂದ ಡಿಸೆಂಬರ್ 1 ರಿಂದ ಹರಿಯಾಣದ ಕುರುಕ್ಷೇತ್ರದಲ್ಲಿ ಆಯೋಜನೆಯಾಗಿದೆ.

ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕತೆಯ ಸಮಾಗಮವಾದ ಈ ಸಮಾವೇಶದಲ್ಲಿ ಮುಖ್ಯ ಕಾರ್ಯಕ್ರಮಗಳು ನವೆಂಬರ್ 24ರಿಂದ ಡಿಸೆಂಬರ್ 1 ರಿಂದ ನಡೆಯಲಿವೆ ಎಂದು ಕುರುಕ್ಷೇತ್ರ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಭಗವದ್ಗೀತೆ ಮಹೋತ್ಸವ ಕಾರ್ಯಕ್ರಮದಲ್ಲಿ 40 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

IGM-2025 ಪ್ರಯುಕ್ತ ಇಂದು ಮಂಡಳಿಯ ಮುಖ್ಯ ಕಚೇರಿಯಲ್ಲಿ ಹರಿಯಾಣ ರಾಜ್ಯಪಾಲ ಅಸೀಮ್ ಕುಮಾರ್ ಘೋಷ್ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಿಎಂ ನಯಾಬ್ ಸಿಂಗ್ ಶೈನಿ, ಸ್ವಾಮಿ ಜ್ಞಾನಾನಂದ ಮಹಾರಾಜ್ ಹಾಗೂ ಕುರುಕ್ಷೇತ್ರ ಸಂಸದ ನವೀನ್ ಜಿಂದಾಲ್ ಸಭೆಯಲ್ಲಿದ್ದರು.

ಕಾರ್ಯಕ್ರಮದ ಪ್ರಚಾರ ಹಾಗೂ ಸಂಘಟನೆಗಾಗಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.