ADVERTISEMENT

ಗೋಲ್ಡಿ ಬ್ರಾರ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್

ಪಿಟಿಐ
Published 10 ಜೂನ್ 2022, 1:25 IST
Last Updated 10 ಜೂನ್ 2022, 1:25 IST
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ   

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಗೋಲ್ಡಿ ಬ್ರಾರ್ ಕೆನಡಾದಲ್ಲಿ ವಾಸವಾಗಿದ್ದು, ಸಿಧು ಹತ್ಯೆಯ ಹೊಣೆ ಹೊತ್ತುಕೊಂಡಿರುವುದರಿಂದ, ಪ್ರಕರಣದ ತನಿಖೆಗೆ ಅನುಕೂಲವಾಗುವಂತೆ ಸಿಬಿಐ, ಇಂಟರ್‌ಪೋಲ್‌ಗೆ ನೆರವು ಕೇಳಿತ್ತು.

ಹಳೆಯ ಎರಡು ಪ್ರಕರಣ ಜತೆಗೆ, ಸಿಧು ಹತ್ಯೆಯಲ್ಲಿ ಗೋಲ್ಡಿ ಬ್ರಾರ್ ಕೈವಾಡ ಇರುವುದರಿಂದ, ಪಂಜಾಬ್ ಪೊಲೀಸ್ ಮತ್ತು ಸಿಬಿಐ, ಇಂಟರ್‌ಪೋಲ್ ಮೊರೆ ಹೋಗಿವೆ.

ADVERTISEMENT

ಪಂಜಾಬ್‌ನ ಶ್ರೀ ಮುಕ್ತಾರ್ ಸಾಹಿಬ್‌ನ ನಿವಾಸಿಯಾಗಿದ್ದ ಬ್ರಾರ್, 2017ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಕೆನಡಾಗೆ ಹೋಗಿದ್ದು, ನಂತರ ಅಲ್ಲಿಯೇ ಇದ್ದುಕೊಂಡು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.