ADVERTISEMENT

ವಿಮಾನಯಾನ ಸೇವೆಗೆ ನಿರ್ಬಂಧ ಹೇರಿದ ಇರಾನ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 12:07 IST
Last Updated 24 ಏಪ್ರಿಲ್ 2021, 12:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಟೆಹ್ರಾನ್‌ (ಎ.ಪಿ): ಕೋವಿಡ್‌ ಗಂಭೀರ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದಿಂದ ವಿಮಾನಯಾನ ಸಂಪರ್ಕವನ್ನು ಇರಾನ್‌ ನಿರ್ಬಂಧಿಸಿದೆ. ಉಭಯ ದೇಶಗಳಲ್ಲಿ ಕೊರೊನಾದ ರೂಪಾಂತರ ಸೋಂಕು ಕಾಣಿಸಿರುವ ಕಾರಣ ಈ ಕ್ರಮವಹಿಸಲಾಗಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.

ಇರಾನ್‌ ನಾಗರಿಕ ವಿಮಾನಯಾನ ಸಂಸ್ಥೆಯ ವಕ್ತಾರ್ ಮೊಹಮ್ಮದ್‌ ಹಸನ್ ಜಿಬಾಕ್ಷ್ ಅವರು, ‘ಉಭಯ ದೇಶಗಳಿಗೆ ನಿಯಮಿತವಾಗಿ ಇರಾನ್‌ನಿಂದ ವಿಮಾನಯಾನ ಸೇವೆ ಇರುವುದಿಲ್ಲ. ಅಪರೂಪಕ್ಕೆ ವಿಮಾನ ಸಂಚಾರ ಇರುತ್ತದೆ’ ಎಂದು ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT