ADVERTISEMENT

ಐಆರ್‌ಸಿಟಿಸಿ: ‘ಶ್ರಿ ರಾಮಾಯಣ ಯಾತ್ರೆ’ ಆರಂಭ

ಪಿಟಿಐ
Published 5 ಜುಲೈ 2025, 13:37 IST
Last Updated 5 ಜುಲೈ 2025, 13:37 IST
   

ನವದೆಹಲಿ: ಭಾರತೀಯ ರೈಲ್ವೆ ಆಹಾರ ಸರಬರಾಜು ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ‘ಶ್ರೀ ರಾಮಾಯಣ ಯಾತ್ರೆ’ಯ ವಿಶೇಷ ರೈಲು ಪ್ರವಾಸವನ್ನು ಇದೇ 25ರಿಂದ ಕೈಗೊಂಡಿದೆ. 

ಅಯೋಧ್ಯಯಿಂದ ಪ್ರಾರಂಭವಾಗಿ ನಂದಿಗ್ರಾಮ, ಸೀತಾಮರ್ಹಿ, ಜನಕಪುರ, ಬಕ್ಸರ್, ವಾರಾಣಸಿ, ಪ್ರಯಾಗರಾಜ್‌, ಚಿತ್ರಕೂಟ, ನಾಸಿಕ್‌, ಹಂಪಿ ಮತ್ತು ರಾಮೇಶ್ವರ ದ್ವೀಪ ಸೇರಿದಂತೆ 17 ದಿನಗಳು ರಾಮನಿಗೆ ಸಂಬಂಧಿಸಿದ ಸುಮಾರು 30 ಸ್ಥಳಗಳನ್ನು ಒಳಗೊಂಡಿರಲಿದೆ.

‘ರಾಮಮಂದಿರ ಉದ್ಘಾಟನೆಯ ಬಳಿಕ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಸ್ಥಳಗಳಿಗೆ ಭೇಟಿ ನೀಡುವುದರಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ದೊರೆತಿದೆ. ಉದ್ಘಾಟನೆಯ ನಂತರ, ಇದು ನಾವು ನಡೆಸುತ್ತಿರುವ 5ನೇ ರಾಮಾಯಣ ಪ್ರವಾಸವಾಗಿದೆ. ಹಿಂದಿನ ಎಲ್ಲ ಪ್ರವಾಸಗಳಿಗೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ’ ಎಂದು ಐಆರ್‌ಸಿಟಿಸಿ ಅಧಿಕಾರಿ ತಿಳಿಸಿದರು.

ADVERTISEMENT

ಟಿಕೆಟ್‌ ದರದ ವಿವರ/ಪಟ್ಟಿ (ಕ್ಲಾಸ್‌ – ಟಿಕೆಟ್‌ ದರ (ತಲಾ ಒಬ್ಬರಿಗೆ))

1 ಎಸಿ ಕೂಪೆ–   ₹1,79,515

1 ಎಸಿ ಕ್ಲಾಸ್‌ ಕ್ಯಾಬಿನ್‌– ₹1,66,380

2 ಎಸಿ– ₹1,40,120

3 ಎಸಿ–  ₹1,17,975

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.