ADVERTISEMENT

ಐಆರ್‌ಸಿಟಿಸಿಯ ತೇಜಸ್‌ ಕಾರ್ಪೊರೇಟ್ ರೈಲು ಸೇವೆ ಅಕ್ಟೋಬರ್ 17ರಿಂದ ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 14:26 IST
Last Updated 7 ಅಕ್ಟೋಬರ್ 2020, 14:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐಆರ್‌ಸಿಟಿಸಿ ಬುಧವಾರ ತನ್ನ ಎರಡು ತೇಜಸ್ ಎಕ್ಸ್ ಪ್ರೆಸ್ ರೈಲುಗಳ ಕಾರ್ಯಾಚರಣೆಯನ್ನು ಅಕ್ಟೋಬರ್ 17 ರಿಂದ ಲಖನೌ-ನವದೆಹಲಿ ಮತ್ತು ಅಹಮದಾಬಾದ್-ಮುಂಬೈ ನಡುವೆ ಪುನರಾರಂಭಿಸುವುದಾಗಿ ತಿಳಿಸಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ಎರಡು ರೈಲುಗಳ ಸೇವೆಗಳನ್ನು ಮಾರ್ಚ್ 19 ರಂದು ಸ್ಥಗಿತಗೊಳಿಸಲಾಗಿತ್ತು.

ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಫೇಸ್ ಕವರ್ / ಮಾಸ್ಕ್ ಬಳಕೆ ಮಾಡುವುದು ಕಡ್ಡಾಯವಾಗಿರುತ್ತದೆ. ಎಲ್ಲಾ ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು ಮತ್ತು ಅಗತ್ಯವಿರುವಾಗ ಅದನ್ನು ತೋರಿಸಬೇಕಾಗುತ್ತದೆ. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಪ್ರಯಾಣಿಕರಿಗೆ ವಿವರವಾದ ಸೂಚನೆಗಳನ್ನು ನೀಡಲಾಗುವುದು ಎಂದು ಆರಂಭಿಕ ಅವಧಿಯಲ್ಲಿ ಅನುಸರಿಸಬೇಕಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಬಗ್ಗೆ ಐಆರ್‌ಸಿಟಿಸಿ ತಿಳಿಸಿದೆ.

ADVERTISEMENT

ಅಂತರವನ್ನು ಕಾಪಾಡಿಕೊಳ್ಳಲು ಎರಡು ರೈಲುಗಳಲ್ಲಿಯೂ ಪರ್ಯಾಯ ಆಸನಗಳನ್ನು ಖಾಲಿ ಇಡಲಾಗುವುದು ಮತ್ತು ಪ್ರಯಾಣಿಕರು ಕೋಚ್‌ಗೆ ಪ್ರವೇಶಿಸುವ ಮೊದಲು ಉಷ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಮ್ಮೆ ಕುಳಿತ ನಂತರ ಅವರ ಆಸನಗಳನ್ನು ವಿನಿಮಯ ಮಾಡಿಕೊಳ್ಳಲು ಅನುಮತಿಯಿಲ್ಲ ಎಂದು ಅದು ಹೇಳಿದೆ.

ಪ್ರಯಾಣಿಕರಿಗೆ 'ಕೋವಿಡ್-19 ಪ್ರೊಟೆಕ್ಷನ್ ಕಿಟ್' ನೀಡಲಾಗುವುದು. ಅರದಲ್ಲಿ ಸ್ಯಾನಿಟೈಸರ್‌ ಬಾಟಲ್, ಒಂದು ಮಾಸ್ಕ್, ಒಂದು ಫೇಸ್‌ ಶೀಲ್ಡ್ ಮತ್ತು ಒಂದು ಜೋಡಿ ಕೈಗವಸುಗಳನ್ನು ಹೊಂದಿರುತ್ತದೆ.

ಉಗ್ರಾಣ ಪ್ರದೇಶ ಮತ್ತು ಶೌಚಾಲಯಗಳು ಸೇರಿದಂತೆ ಕೋಚ್ ಅನ್ನು ನಿಯಮಿತವಾಗಿ ಸೋಂಕು ರಹಿತಗೊಳಿಸಲಾಗುತ್ತದೆ. ಪ್ರಯಾಣಿಕರ ಸಾಮಾನು-ಸರಂಜಾಮುಗಳನ್ನು ಸಿಬ್ಬಂದಿಯೇ ಸ್ವಚ್ಛಗೊಳಿಸುತ್ತಾರೆ.

ಎರಡು ತೇಜಸ್ ಎಕ್ಸ್‌ಪ್ರೆಸ್ ರೈಲುಗಳು ಭಾರತೀಯ ರೈಲ್ವೆ ಅಂಗಸಂಸ್ಥೆಯಾದ ಐಆರ್‌ಸಿಟಿಸಿಯ ಕಾರ್ಪೊರೇಟ್ ಘಟಕದಿಂದ ನಡೆಸಲ್ಪಡುವ ಮೊದಲ ರೈಲುಗಳಾಗಿವೆ. ಐಆರ್‌ಸಿಟಿಸಿ ಚಾಲಿತ ಮೂರನೇ ರೈಲು, ಇಂಧೋರ್ ಮತ್ತು ವಾರಾಣಸಿ ನಡುವಿನ ಕಾಶಿ ಮಹಾಕಾಲ ಎಕ್ಸ್‌ಪ್ರೆಸ್ ಇನ್ನೂ ತನ್ನ ಸೇವೆಗಳನ್ನು ಪ್ರಾರಂಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.