ADVERTISEMENT

ಹೈದರಾಬಾದ್: ಕಾರಿನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್

ಐಎಎನ್ಎಸ್
Published 3 ಜೂನ್ 2022, 11:24 IST
Last Updated 3 ಜೂನ್ 2022, 11:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಕಳೆದ ಶನಿವಾರ ಐವರು ಹದಿಹರೆಯದವರು ಕಾರಿನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.

ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಶಂಕಿತರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಜಕೀಯ ಪ್ರಭಾವ ಹೊಂದಿರುವ ಕುಟುಂಬಕ್ಕೆ ಸೇರಿದ 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಅಪರಾಧದಲ್ಲಿ ಶಾಸಕನ ಮಗನೂ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಆತ ಅತ್ಯಾಚಾರ ಎಸಗುವ ಮುನ್ನವೇ ಕಾರಿನಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಅಪ್ರಾಪ್ತೆ, ಗೆಳೆಯನ ಜೊತೆ ಪಬ್‌ಗೆ ಹೋಗಿದ್ದಳು. ಆದರೆ ಗೆಳೆಯ ಬೇಗನೇ ಅಲ್ಲಿಂದ ಹೊರಟು ಹೋಗಿದ್ದನು. ಬಳಿಕ ಆಕೆಯನ್ನು ಮರ್ಸಿಡಿಸ್ ಕಾರಿನಲ್ಲಿ ಮನೆಗೆ ಬಿಡುವುದಾಗಿ ನಂಬಿಸಿ ಕರೆದುಕೊಂಡ ಹೋದ ಆರೋಪಿಗಳು, ಜುಬಿಲಿ ಹಿಲ್ಸ್ ಬಳಿ ಕಾರು ನಿಲ್ಲಿಸಿ ಅತ್ಯಾಚಾರ ಎಸಗಿದ್ದಾರೆ.

ಬಾಲಕಿಯ ಕುತ್ತಿಗೆಯ ಭಾಗಕ್ಕೆ ಗಾಯವಾಗಿದ್ದು, ತಂದೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.