ADVERTISEMENT

ಫೇಸ್‌ಬುಕ್ ಭಾರತಕ್ಕೆ ಸುಳ್ಳು ಹೇಳುತ್ತಿದೆ: ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2020, 1:44 IST
Last Updated 18 ಡಿಸೆಂಬರ್ 2020, 1:44 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದಹೆಲಿ: ಬಜರಂಗದಳದ ಮೇಲೆ ನಿಷೇಧ ಹೇರುವಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ಫೇಸ್‌ಬುಕ್ ಇಂಡಿಯಾ, ಸಂಸದೀಯ ಸಮಿತಿಗೆ ಸ್ಪಷ್ಟನೆ ನೀಡಿತ್ತು.

ಇದಾದ ಒಂದು ದಿನದ ನಂತರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಬಜರಂಗದಳವನ್ನು ನಿಷೇಧ ಮಾಡುವಂತೆ ಫೇಸ್‌ಬುಕ್ ಭದ್ರತಾ ತಂಡವು ಶಿಫಾರಸು ಮಾಡಿರುವ ವರದಿಯನ್ನು ಉಲ್ಲೇಖಿಸುತ್ತಾ, ಭಾರತ ಹಾಗೂ ಸಂಸತ್ತಿಗೆ ಸುಳ್ಳನ್ನು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಮಾಧ್ಯಮ ವರದಿಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಬಜರಂಗದಳವನ್ನು ನಿಷೇಧಿಸುವಂತೆ ಫೇಸ್‌ಬುಕ್ ಭದ್ರತಾ ತಂಡ ನಿರ್ಧರಿಸಿದೆ ಎಂಬುದನ್ನುಉಲ್ಲೇಖಿಸಿದರು.

ADVERTISEMENT

ಬಜರಂಗದಳದ ಪೋಸ್ಟ್‌ನಲ್ಲಿ ಪ್ರಚೋದನಕಾರಿ ಅಂಶಗಳು ಕಂಡುಬಂದಿದ್ದು, ನಿಷೇಧಿಸಬೇಕು ಎಂದು ಫೇಸ್‌ಬುಕ್ ಅಮೆರಿಕ ಹೇಳುತ್ತಿದೆ. ಆದರೆ ಬಜರಂಗದಳದ ಅಂಶಗಳು ನಿಷೇಧಾತ್ಮಕವಲ್ಲ ಎಂದು ಫೇಸ್‌ಬುಕ್ ಇಂಡಿಯಾ ನಮ್ಮ ಸಂಸದೀಯ ಸಮಿತಿಗೆ ತಿಳಿಸಿದೆ. ಹಾಗಿದ್ದರೆ ಭಾರತ ಹಾಗೂ ಸಂಸತ್ತಿಗೆ ಫೇಸ್‌ಬುಕ್ ಸುಳ್ಳು ಹೇಳುತ್ತಿದೆಯೇ ಎಂದು ಪ್ರಶ್ನಿಸಿದರು.

ಈ ಮೊದಲು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ಸಂಸಂದೀಯ ಸಮಿತಿಗೆ ನೀಡಿರುವ ವರದಿಯಲ್ಲಿ ಬಜರಂಗದಳದ ಮೇಲೆ ನಿಷೇಧ ಹೇರುವಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.