ADVERTISEMENT

ಮುಂಬೈ ದಾಳಿ: ಬದುಕುಳಿದ ಬಾಲಕನಿಗೆ ಮೋದಿ ಶುಭಾಶಯ

ಪಿಟಿಐ
Published 2 ಡಿಸೆಂಬರ್ 2019, 18:06 IST
Last Updated 2 ಡಿಸೆಂಬರ್ 2019, 18:06 IST
ಜರುಸಲೇಂನಲ್ಲಿ 2017ರಲ್ಲಿ ಮೋಶೆ ಭೇಟಿಯಾಗಿದ್ದ ಪ್ರಧಾನಿ ಮೋದಿ
ಜರುಸಲೇಂನಲ್ಲಿ 2017ರಲ್ಲಿ ಮೋಶೆ ಭೇಟಿಯಾಗಿದ್ದ ಪ್ರಧಾನಿ ಮೋದಿ   

ಜರುಸಲೇಂ: ಮುಂಬೈ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಬದುಕುಳಿದ ಇಸ್ರೇಲ್‌ ಬಾಲಕ ಮೋಶೆ ಹೋಲ್ಟ್ಜ್‌ ಬರ್ಗ್‌ 13 ವರ್ಷಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ತಂದೆ– ತಾಯಿಯನ್ನು ಕಳೆದುಕೊಂಡರೂ ಈತ ಬದುಕುಳಿದ ಕಥೆ ‘ಪವಾಡ’ ದಂತಿದೆ. ಈತನ ಧೈರ್ಯ ಇತರರಿಗೂ ಸ್ಫೂರ್ತಿ ಆಗಲಿ ಎಂದು ಪ್ರಧಾನಿ ಹೇಳಿದ್ದಾರೆ.

ದಾಳಿ ನಡೆದ ಸಂದರ್ಭದಲ್ಲಿ ಮೋಶೆ ಎರಡು ವರ್ಷದ ಬಾಲಕನಾಗಿದ್ದ. ‘ಜೀವನ ಪಯಣದ ಮಹತ್ವದ ಪರಿವರ್ತನೆಯತ್ತ ಸಾಗುತ್ತಿರುವ ನಿನಗೆ ಶುಭಾಶಯ. ನಿನ್ನನ್ನು ಬದುಕಿಸಿದ ನಾನಿ ಸಾಂಡ್ರಳ ಧೈರ್ಯ ಮೆಚ್ಚುವಂತದ್ದು. ಆರೋಗ್ಯ ಪೂರ್ಣ ಬದುಕು ನಿನ್ನದಾಗಲಿ’ ಎಂದು ಮೋಶೆಗೆ ಮೋದಿ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT