ADVERTISEMENT

ಜಮ್ಮುಕಾಶ್ಮೀರ, ಈಶಾನ್ಯ ಭಾಗಗಳಿಗೆ ಸಂಪರ್ಕ ಸೇವೆ ಒದಗಿಸಲಿದೆ ಜಿಸ್ಯಾಟ್‌–29

ಉಪಗ್ರಹ ಉಡಾವಣೆ ಯಶಸ್ವಿ

ಏಜೆನ್ಸೀಸ್
Published 14 ನವೆಂಬರ್ 2018, 12:52 IST
Last Updated 14 ನವೆಂಬರ್ 2018, 12:52 IST
   

ಶ್ರೀಹರಿಕೋಟಾ: ದೇಶದ ನೂತನ ಸಂಪರ್ಕ ಉಪಗ್ರಹ ಜಿಸ್ಯಾಟ್‌–29ನ್ನು ಇಸ್ರೊ ಜಿಎಸ್‌ಎಲ್‌ವಿ ಎಂಕೆ3–ಡಿ2 ರಾಕೆಟ್‌ ಮೂಲಕ ಬುಧವಾರ ಉಡಾವಣೆ ಮಾಡಿದೆ.

ಚೆನ್ನೈನಿಂದ 100 ಕಿ.ಮೀ. ದೂರದಲ್ಲಿರುವ ಸತೀಶ್‌ ಧವನ್‌ ಉಡಾವಣಾ ನೆಲೆಯಿಂದ ಸಂಜೆ 5:08ಕ್ಕೆ ರಾಕೆಟ್‌ ಗಾಳಿಯನ್ನು ಸೀಳಿ ಮುನ್ನುಗ್ಗಿತು. 3,423 ಕೆ.ಜಿ. ತೂಕದ ಜಿಸ್ಯಾಟ್‌–29 ಉಪಗ್ರಹ ಕಾ ಮತ್ತು ಕು ಬ್ಯಾಂಡ್‌ ಟ್ರಾನ್ಸ್‌ಪಾಂಡರ್‌ಗಳನ್ನು ಒಳಗೊಂಡಿದೆ. ಇದು ಜಮ್ಮುಕಾಶ್ಮೀರ ಹಾಗೂ ಈಶಾನ್ಯ ಭಾಗದ ಬಳಕೆದಾರರ ಸಂಪರ್ಕ ವ್ಯವಸ್ಥೆ ಸಹಕಾರಿಯಾಗಲಿದೆ.

ಗಜ ಚಂಡಮಾರುತದ ಪರಿಣಾಮದ ಬಗ್ಗೆ ವಿಜ್ಞಾನಿಗಳು ಆತಂಕಗೊಂಡಿದ್ದರು. ಆದರೆ, ಚಂಡಮಾರುತದ ಪಥ ಬದಲಾವಣೆಯಿಂದಾಗಿ ಉಪಗ್ರಹ ಉಡಾವಣೆ ನಿಗದಿತ ಸಮಯದಲ್ಲೇ ನಡೆಯಿತು. ಉಪಗ್ರಹ ಉಡಾವಣೆಯಾಗಿ 18 ನಿಮಿಷಗಳಲ್ಲಿ ಭೂ ಪರಿಭ್ರಮಣ ಕಕ್ಷೆಯನ್ನು ತಲುಪಿದೆ.

ADVERTISEMENT

* ಜಮ್ಮುಕಾಶ್ಮೀರ ಹಾಗೂ ಈಶಾನ್ಯ ಭಾಗದ ಒಳಪ್ರದೇಶಗಳಿಗೂ ಈ ಉಪಗ್ರಹದಿಂದ ಸಂಪರ್ಕ ಸೇವೆ ಪೂರೈಕೆಯಾಗಲಿದೆ.

–ಕೆ.ಶಿವನ್‌, ಇಸ್ರೊ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.