
ಪಿಟಿಐ
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಬಾಹುಬಲಿ ರಾಕೆಟ್ ಎಲ್‌ವಿಎಂ3–ಎಂ6 ಉಡಾವಣೆ ವಾಹಕದ ಮೂಲಕ ಯಶಸ್ವಿಯಾಗಿ ನಭಕ್ಕೆ ಸೇರಿದ್ದ ‘ಬ್ಲೂಬರ್ಡ್ ಬ್ಲಾಕ್–2’ ಸಂವಹನ ಉಪಗ್ರಹವು ಮುಂದಿನ ವಾರದಿಂದ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್ ಸಂಸ್ಥೆ ತಿಳಿಸಿದೆ.
ಹೊಸ ತಲೆಮಾರಿನ ಸಂವಹನ ಉಪಗ್ರಹವನ್ನು ಎಎಸ್‌ಟಿ ಸ್ಪೇಸ್‌ಮೊಬೈಲ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಎಲ್‌ವಿಎಂ3 ರಾಕೆಟ್ ಇದೇ ಮೊದಲ ಬಾರಿಗೆ 6,100 ಕೆ.ಜಿ ತೂಕದ ಪೇಲೋಡ್‌ಗಳನ್ನು ಡಿ.24ರಂದು ನಭಕ್ಕೆ ಸೇರಿಸಿತ್ತು.
ಭೂ ಮೇಲ್ಮೈನಿಂದ 600 ಕಿ.ಮೀ. ಎತ್ತರದಲ್ಲಿ ವಾಣಿಜ್ಯ ಉದ್ದೇಶದ ಉಪಗ್ರಹವನ್ನು ಸೇರಿಸುವ ಮಹತ್ವದ ಯೋಜನೆ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.