ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಕೇಂದ್ರದಲ್ಲಿ ಉಡ್ಡಯನಕ್ಕೆ ಸಜ್ಜಾಗಿರುವ ಪಿಎಸ್‌ಎಲ್‌ವಿ ಹಾಗೂ ಪಿಎಸ್‌ಎಲ್‌ವಿ–ಎಕ್ಸ್‌ಎಲ್ ಒಳಗೊಂಡ ರಾಕೇಟ್
ಪಿಟಿಐ ಚಿತ್ರ
ಶ್ರೀಹರಿಕೋಟಾ: ಯುರೋಪಿಯನ್ ಸ್ಪೇಸ್ ಏಜೆನ್ಸಿ(ಎಎಸ್‌ಎ)ಯ ಉಪಗ್ರಹ ‘ಪ್ರೋಬಾ–3’ಯಲ್ಲಿ ದೋಷ ಪತ್ತೆಯಾಗಿರುವ ಕಾರಣ, ಉಪಗ್ರಹ ಉಡ್ಡಯನವನ್ನು ಡಿ.5ಕ್ಕೆ ಮರು ನಿಗದಿ ಮಾಡಲಾಗಿದೆ ಎಂದು ಇಸ್ರೊ ಬುಧವಾರ ಘೋಷಿಸಿದೆ.
‘ಪ್ರೋಬಾ–3’ ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ–ಸಿ59 ರಾಕೆಟ್ ಅನ್ನು ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ 4.09ಕ್ಕೆ ಉಡ್ಡಯನ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ದೋಷ ಪತ್ತೆಯಾದ ಕಾರಣ ಇಎಸ್‌ಎ ಮನವಿ ಮೇರೆಗೆ, ಈ ಉಪಗ್ರಹದ ಉಡ್ಡಯನವನ್ನು ಗುರುವಾರ ಸಂಜೆ 4.12ಕ್ಕೆ ಮರುನಿಗದಿ ಮಾಡಲಾಗಿದೆ‘ ಎಂದು ನಿಗದಿತ ಉಡಾವಣೆಗೂ ಕೆಲ ನಿಮಿಷಗಳ ಮೊದಲು ಇಸ್ರೊ ಪ್ರಕಟಿಸಿತು.
‘ಉಪಗ್ರಹದ ನೋದನ ವ್ಯವಸ್ಥೆಯಲ್ಲಿ (ಪ್ರೊಪಲ್ಷನ್ ಸಿಸ್ಟಮ್) ದೋಷ ಇರುವುದು ಪತ್ತೆ ಇರುವುದನ್ನು ಪತ್ತೆ ಮಾಡಿರುವ ವಿಜ್ಞಾನಿಗಳು, ದೋಷ ಕಂಡು ಬರಲು ಕಾರಣವಾದ ಅಂಶಗಳನ್ನು ಗುರುತಿಸುತ್ತಿದ್ದಾರೆ’ ಎಂದು ಇಎಸ್‌ಎ ಮಹಾನಿರ್ದೇಶಕ ಜೋಸೆಫ್ ಅಶ್‌ಬಹಾರ್ ತಿಳಿಸಿದ್ದಾರೆ.
ಬೆಲ್ಜಿಯಂನ ರೆಡುವಿನಲ್ಲಿರುವ ಇಎಸ್‌ಎನ ಇಎಸ್‌ಇಸಿ ಕೇಂದ್ರದಲ್ಲಿ ಕಾರ್ಯಾಚರಣೆ ನಿಯಂತ್ರಣ ತಂಡವು ಸಾಫ್ಟ್‌ವೇರ್ ಬಳಸಿ ದೋಷ ಪರಿಹರಿಸಿದ ನಂತರ ಗುರುವಾರ ಉಡ್ಡಯನಕ್ಕೆ ಅನುಮತಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.