ADVERTISEMENT

ಗಗನಯಾನ ಉಡಾವಣೆಗೂ ಮುನ್ನ ಬಾಹ್ಯಾಕಾಶಕ್ಕೆ ‘ರೋಬೊ’: ವಿ.ನಾರಾಯಣನ್‌

ಪಿಟಿಐ
Published 28 ಜುಲೈ 2025, 16:11 IST
Last Updated 28 ಜುಲೈ 2025, 16:11 IST
   

ಚೆನ್ನೈ: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಗಗನಯಾತ್ರಿಗಳನ್ನು ಕರೆದೊಯ್ಯುವ ಮುನ್ನ ಅಲ್ಲಿನ ವ್ಯವಸ್ಥೆಗಳನ್ನು ತಿಳಿಯಲು ರೋಬೊ ಕಳುಹಿಸಿಕೊಡಲಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ವಿ.ನಾರಾಯಣನ್‌ ತಿಳಿಸಿದರು.

ಜುಲೈ 30ರಂದು ‘ನಿಸಾರ್‌’ ಉಪಗ್ರಹ ಉಡಾವಣೆಗಾಗಿ ಶ್ರೀಹರಿಕೋಟಾಕ್ಕೆ ತೆರಳುವ ಮುನ್ನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ವಿಷಯ ಪ್ರಸ್ತಾಪಿಸಿದರು.

‘ಪೂರ್ವ ನಿಗದಿಯಂತೆ 2027ರ ಮಾರ್ಚ್‌ ತಿಂಗಳಲ್ಲಿ ಇಸ್ರೊ ಗಗನಯಾನ ಹಮ್ಮಿಕೊಂಡಿದೆ. ಅದಕ್ಕೂ ಮುನ್ನ ಪರೀಕ್ಷಾರ್ಥವಾಗಿ ಈ ವರ್ಷ ಡಿಸೆಂಬರ್‌ನಲ್ಲಿ ರೋಬೊ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗುವುದು.‘ವ್ಯೋಮ್‌ಮಿತ್ರ’ ರೋಬೊ ಕಳುಹಿಸುವ ಯೋಜನೆ ಯಶಸ್ವಿಯಾದರೆ, 2027ರಲ್ಲಿ ನಿಗದಿಯಂತೆ ಗಗನಯಾನವು ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.