ADVERTISEMENT

ಐಟಿ ದಾಳಿ ವೇಳೆ ₹500 ಕೋಟಿ ಕಪ್ಪುಹಣ ಪತ್ತೆ

ಪಿಟಿಐ
Published 12 ಜುಲೈ 2022, 15:51 IST
Last Updated 12 ಜುಲೈ 2022, 15:51 IST
   

ನವದೆಹಲಿ: ತಮಿಳುನಾಡಿನ ಎರಡು ಉದ್ಯಮ ಸಂಸ್ಥೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯು ₹500 ಕೋಟಿಗಿಂತಲೂ ಅಧಿಕ ಕಪ್ಪುಹಣ ಪತ್ತೆಹಚ್ಚಿದೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ.

‘ಈ ಉದ್ಯಮ ಸಂಸ್ಥೆಗಳುರಿಯಲ್‌ ಎಸ್ಟೇಟ್‌ ಹಾಗೂ ಸಿವಿಲ್‌ ಕಾಮಗಾರಿಗಳನ್ನು ನಡೆಸುತ್ತಿದ್ದವು. ಇವುಗಳಿಗೆ ಸೇರಿದ್ದ ಚೆನ್ನೈ, ಕೊಯಮತ್ತೂರು ಹಾಗೂ ಮಧುರೈನ 40ಕ್ಕೂ ಹೆಚ್ಚು ಸ್ಥಳಗಳಲ್ಲಿಅಧಿಕಾರಿಗಳು ಜುಲೈ 6ರಂದು ಶೋಧ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಅವುಗಳನ್ನು ಪರಿಶೀಲಿಸಿದಾಗ ನಕಲಿ ಬಿಲ್‌ಗಳನ್ನು ಸೃಷ್ಟಿಸಿರುವುದೂ ಸೇರಿದಂತೆ ವಿವಿಧ ಬಗೆಯಲ್ಲಿ ತೆರಿಗೆ ವಂಚಿಸಿರುವುದು ಬಹಿರಂಗವಾಗಿದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT