ADVERTISEMENT

ಅಮರನಾಥ ಯಾತ್ರಿಗಳಿಗೆ ಕಾಶ್ಮೀರಿಗಳು ನಿಜವಾದ ಭದ್ರತೆ ಒದಗಿಸಲಿದ್ದಾರೆ: ಮೆಹಬೂಬಾ

ಪಿಟಿಐ
Published 29 ಜೂನ್ 2022, 11:27 IST
Last Updated 29 ಜೂನ್ 2022, 11:27 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ: ಅಮರನಾಥ ಯಾತ್ರಿಗಳಿಗೆ ನಿಜವಾದ ಭದ್ರತೆಯನ್ನು ಕಾಶ್ಮೀರದ ಜನರು ಒದಗಿಸುತ್ತಾರೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದವಾರ್ಷಿಕ ಅಮರನಾಥ ಯಾತ್ರೆ ಎರಡು ವರ್ಷಗಳ ಬಳಿಕ ಗುರುವಾರದಿಂದ ಆರಂಭವಾಗಲಿದೆ.

ಯಾತ್ರೆಯ ಮಾರ್ಗದಲ್ಲಿ ಅಂಗಡಿಗಳನ್ನು ಮುಚ್ಚುವುದು ಸೇರಿದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೆಹಬೂಬಾ ಮುಫ್ತಿ, ಎರಡು ವರ್ಷಗಳ ನಂತರ ಅಮರನಾಥ ಯಾತ್ರೆಯು ಪುನರಾರಂಭಗೊಳ್ಳುತ್ತಿದೆ. ಕಾಶ್ಮೀರಿಗಳು ಅವರನ್ನುತುಂಬು ಹೃದಯದಿಂದ ಸ್ವಾಗತಿಸುತ್ತಾರೆ ಎಂಬುದರಲ್ಲಿ ನನಗೆ ಖಾತ್ರಿಯಿದೆ ಎಂದು ಟ್ವೀಟಿಸಿದ್ದಾರೆ.

ಅಮರನಾಥ ಯಾತ್ರೆ ಅವಧಿಯಲ್ಲಿ ವ್ಯಾಪಾರವನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ಆರೋಪಿಸಿ ಪಂಥಾಚೌಕ್‌ನ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.