ADVERTISEMENT

ಪಾಕಿಸ್ತಾನ ಮಾಡಬೇಕಿದ್ದ ಕೆಲಸವನ್ನು ನಾವು ಮಾಡಿದ್ದೇವೆ: ನಿರ್ಮಲಾ ಸೀತಾರಾಮನ್

ನಮ್ಮದು ಆಕ್ರಮಣಶೀಲತೆ ಅಲ್ಲ: ಸಚಿವೆ

ಏಜೆನ್ಸೀಸ್
Published 10 ಮಾರ್ಚ್ 2019, 10:41 IST
Last Updated 10 ಮಾರ್ಚ್ 2019, 10:41 IST
ನಿರ್ಮಲಾ ಸೀತಾರಾಮನ್ -ಎಎನ್‌ಐ ಚಿತ್ರ
ನಿರ್ಮಲಾ ಸೀತಾರಾಮನ್ -ಎಎನ್‌ಐ ಚಿತ್ರ   

ಚೆನ್ನೈ:ಬಾಲಾಕೋಟ್‌ಬಳಿ ಜೈಷ್‌ ಎ ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಮಾಡಬೇಕಿದ್ದ ಕೆಲಸವನ್ನು ನಾವು ಮಾಡಿದ್ದೇವಷ್ಟೆ. ನಮ್ಮದು ಆಕ್ರಮಣಶೀಲತೆ ಅಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಿಜವಾಗಿಯೂ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ಪಾಕಿಸ್ತಾನದವರು ಮಾಡಬೇಕಿತ್ತು. ಆದರೆ, ಆ ದೇಶ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಪಷ್ಟ. ಅದು ಭಯೋತ್ಪಾದಕರಿಗೆ ತರಬೇತಿ, ಹಣಕಾಸು ನೆರವು, ಸೇನಾ ಬೆಂಬಲ ನೀಡುವ ದೇಶವಾಗಿ ಮುಂದುವರಿಯುತ್ತಿದೆ’ ಎಂದು ಹೇಳಿದರು.

ಭಯೋತ್ಪಾದನೆಗೆ ಹಣಕಾಸು ನೆರವು, ಶಕ್ತಿ, ತರಬೇತಿ ನೀಡುವ ಮುಖ್ಯ ಕೇಂದ್ರವನ್ನೇ ಹೊಡೆಯಲು ನಾವು ನಿರ್ಧರಿಸಿದ್ದೆವು. ನಮ್ಮ ಬಳಿ ಸಾಕಷ್ಟು ಗುಪ್ತಚರ ಮಾಹಿತಿ ಇದ್ದವು ಎಂದೂ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.