ADVERTISEMENT

ರಸ್ತೆ ನಿರ್ಮಾಣ: ಐಟಿಬಿಪಿಯಿಂದ ಎಂಜಿನಿಯರಿಂಗ್ ವಿಭಾಗ ನಿಯೋಜನೆ

ಪಿಟಿಐ
Published 7 ನವೆಂಬರ್ 2021, 15:42 IST
Last Updated 7 ನವೆಂಬರ್ 2021, 15:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಲಡಾಖ್‌ ಮತ್ತು ಅರುಣಾಚಲ ಪ್ರದೇಶದಲ್ಲಿನ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ರಸ್ತೆ ಮತ್ತು ಕಾಲುದಾರಿಗಳನ್ನು ನಿರ್ಮಿಸಲು ಇಂಡೊ–ಟಿಬೆಟಿಯನ್ ಗಡಿ ಪೊಲೀಸ್ ಪಡೆಯು (ಐಟಿಬಿಪಿ) ತನ್ನದೇ ಆದ ವಿಶೇಷ ಎಂಜಿನಿಯರಿಂಗ್ ವಿಭಾಗವನ್ನು ನಿಯೋಜಿಸಲು ಮೊದಲ ಬಾರಿಗೆ ನಿರ್ಧಾರ ಕೈಗೊಂಡಿದೆ.

ಪೂರ್ವ ಲಡಾಖ್‌ ಪ್ರದೇಶದಲ್ಲಿ ಚೀನಾದೊಂದಿಗೆತಲೆದೋರಿರುವ ಬಿಕ್ಕಟ್ಟಿನ ಮಧ್ಯೆ ಕೇಂದ್ರ ಗೃಹ ಸಚಿವಾಲಯವು ಐಟಿಬಿಪಿಯ ಈ ಕ್ರಮವನ್ನು ಅನುಮೋದಿಸಿದೆ.

ಇಂಡೊ-ಚೀನಾ ಗಡಿ ರಸ್ತೆಗಳ ಯೋಜನೆಯ ಎರಡನೇ ಹಂತದಲ್ಲಿ ಸರ್ಕಾರದಿಂದ ಮಂಜೂರಾಗಿರುವ 32 ರಸ್ತೆಗಳ ಪೈಕಿ ನಾಲ್ಕು ರಸ್ತೆಗಳನ್ನು ಮತ್ತು 18 ಕಾಲುದಾರಿಗಳ ಪೈಕಿ ಎರಡು ಕಾಲುದಾರಿಗಳನ್ನು ನಿರ್ಮಿಸುವ ಸವಾಲು ಐಟಿಬಿಪಿ ಮುಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಐಟಿಬಿಪಿಯ ಎಂಜಿನಿಯರ್‌ಗಳು ಮತ್ತು ಮೇಲ್ವಿಚಾರಕರು ರಸ್ತೆ ಕಾಮಗಾರಿಗಳ ಮೇಲ್ವಿಚಾರಣೆ ವಹಿಸಲಿದ್ದಾರೆ. ಕಾರ್ಮಿಕರನ್ನು ಸರ್ಕಾರದ ನಿಯಮಗಳ ಪ್ರಕಾರ ನೇಮಕಗೊಳಿಸಲಾಗುವುದು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.