ADVERTISEMENT

ನಡ್ಡಾ ಟ್ವಿಟರ್‌ ಹ್ಯಾಕ್‌: ಉಕ್ರೇನ್‌, ರಷ್ಯಾಗೆ ಕ್ರಿಪ್ಟೊಕರೆನ್ಸಿ ನೆರವು ಯಾಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2022, 5:22 IST
Last Updated 27 ಫೆಬ್ರುವರಿ 2022, 5:22 IST
ಜೆ.ಪಿ ನಡ್ಡಾ
ಜೆ.ಪಿ ನಡ್ಡಾ    

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟರ್ ಖಾತೆಯನ್ನು ಭಾನುವಾರ ಹ್ಯಾಕ್ ಮಾಡಲಾಗಿದೆ. ಉಕ್ರೇನ್‌ ಮತ್ತು ರಷ್ಯಾಗೆ ಬೆಂಬಲ ಯಾಚಿಸಿ, ಕ್ರಿಪ್ಟೋ ಕರೆನ್ಸಿ ಮೂಲಕ ದೇಣಿಗೆ ಯಾಚಿಸುವ ಪೋಸ್ಟ್‌ ಅನ್ನು ನಡ್ಡಾ ಖಾತೆ ಮೂಲಕ ಪ್ರಕಟಿಸಲಾಗಿದೆ.

'ಉಕ್ರೇನ್ ಜನರಿಗೆ ಬೆಂಬಲ ನೀಡಿ. ಕ್ರಿಪ್ಟೋಕರೆನ್ಸಿ ಮೂಲಕ ದೇಣಿಗೆ ಸ್ವೀಕರಿಸಲಾಗುತ್ತಿದೆ. ಬಿಟ್‌ಕಾಯಿನ್ ಮತ್ತು ಎಥೆರಿಯಮ್‌ನಿಂದ ದೇಣಿಗೆ ನೀಡಬಹುದು’ ಎಂದು ಟ್ವೀಟ್‌ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಉಕ್ರೇನ್‌ ಪರವಾದ ಟ್ವೀಟ್‌ ಡಿಲಿಟ್‌ ಮಾಡಿ ರಷ್ಯಾದ ಹೆಸರಲ್ಲೂ ಪೋಸ್ಟ್‌ ಪ್ರಕಟಿಸಲಾಗಿದೆ.

ಹ್ಯಾಕರ್‌ಗಳು ಪ್ರಕಟಿಸಿದ್ದ ಎಲ್ಲ ಪೋಸ್ಟ್‌ಗಳನ್ನು ಈಗ ಡಿಲಿಟ್‌ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.