ADVERTISEMENT

Jagdeep Dhankhar: ಪಿಂಚಣಿಗೆ ಅರ್ಜಿ ಸಲ್ಲಿಸಿದ ಜಗದೀಪ್ ಧನಕರ್‌

ಪಿಟಿಐ
Published 30 ಆಗಸ್ಟ್ 2025, 13:23 IST
Last Updated 30 ಆಗಸ್ಟ್ 2025, 13:23 IST
   

ಜೈಪುರ: ತಮಗೆ ಸಿಗಬೇಕಿರುವ ಮಾಜಿ ಶಾಸಕರ ಪಿಂಚಣಿಯನ್ನು ಪುನರಾರಂಭಿಸುವಂತೆ ಕೋರಿ ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ರಾಜಸ್ಥಾನ ವಿಧಾನಸಭೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1993 ರಿಂದ 1998ರವರೆಗೆ ಕಿಶನ್‌ಗಢ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಧನಕರ್‌ ಅವರು, 2019ರ ಜುಲೈ ವರೆಗೆ ಪಿಂಚಣಿ ಪಡೆಯುತ್ತಿದ್ದರು . ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡ ಬಳಿಕ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿತ್ತು.

ಆರೋಗ್ಯ ಸಮಸ್ಯೆಗಳ ಕಾರಣ ನೀಡಿ ಜುಲೈ 21ರಂದು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಅಂಗೀಕರಿಸಿದ ದಿನದಿಂದ ಪಿಂಚಣಿ ಸೌಲಭ್ಯ ಅನ್ವಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಾಜಸ್ಥಾನದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದವರಿಗೆ ಪ್ರತಿ ತಿಂಗಳು ₹35 ಸಾವಿರ ಪಿಂಚಣಿ ನೀಡಲಾಗುತ್ತದೆ. ಹೆಚ್ಚಿನ ಅವಧಿ ಹಾಗೂ ವಯಸ್ಸನ್ನು ಪರಿಗಣಿಸಿ ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗುತ್ತದೆ.

70 ವರ್ಷ ಮೇಲ್ಪಟ್ಟವರು ಶೇ 20ರಷ್ಟು ಹೆಚ್ಚು ಪಡೆಯುತ್ತಾರೆ. ಧನಕರ್‌ ಅವರಿಗೆ 74 ವರ್ಷವಾಗಿದ್ದು, ಪ್ರತಿ ತಿಂಗಳು ₹42 ಸಾವಿರ ಸಿಗಲಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.