ADVERTISEMENT

ಪಂಜಾಬ್‌: ಗುಂಡು ಹಾರಿಸಿ ಇಬ್ಬರ ಕೊಲೆ

ಜೈಲಿನಲ್ಲಿರುವ ದರೋಡೆಕೋರ ಜಗ್ಗು ಭಗವಾನ್‌ಪುರಿಯಾ ತಾಯಿ ಸಾವು

ಪಿಟಿಐ
Published 27 ಜೂನ್ 2025, 14:07 IST
Last Updated 27 ಜೂನ್ 2025, 14:07 IST
.
.   

ಚಂಡೀಗಢ: ಜೈಲಿನಲ್ಲಿರುವ ದರೋಡೆಕೋರ ಜಗ್ಗು ಭಗವಾನ್‌ಪುರಿಯಾ ಅವರ ತಾಯಿ ಅರ್ಜಿತ್‌ ಕೌರ್‌ (52) ಹಾಗೂ ಅವರೊಂದಿಗಿದ್ದ ವ್ಯಕ್ತಿಯೊಬ್ಬರ ಮೇಲೆ ಬೈಕ್‌ನಲ್ಲಿ ಬಂದ ಅಪರಿಚಿತರು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಪಂಜಾಬ್‌ನ ಬಟಾಲಾದಲ್ಲಿ ಗುರುವಾರ ರಾತ್ರಿ 9.30ರ ಸುಮಾರಿಗೆ ಅರ್ಜಿತ್‌ ಕೌರ್‌ ಹಾಗೂ ಕರಣ್‌ವೀರ್‌ ಸಿಂಗ್‌ ಕಾರಿನಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತರು ಗುಂಡು ಹಾರಿಸಿದ್ದಾರೆ. ಅರ್ಜಿತ್‌ ಕೌರ್‌ ತೀವ್ರವಾಗಿ ಗಾಯಗೊಂಡಿದ್ದು, ಅಮೃತಸರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕರಣ್‌ವೀರ್‌ ಸಿವಿಲ್‌ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಬಟಾಲಾದ ಡಿಎಸ್‌ಪಿ ಪರಮವೀರ್‌ ಸಿಂಗ್‌ ಶುಕ್ರವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT