ADVERTISEMENT

ಜೈಲಿನಲ್ಲಿರುವ ಟಿಎಂಸಿ ಮುಖಂಡನಿಗೆ ವಿಧಾನಸಭೆಯ ಸಲಹಾ ಸಮಿತಿ ಸಭೆಗೆ ಆಹ್ವಾನ

ಪಿಟಿಐ
Published 8 ಸೆಪ್ಟೆಂಬರ್ 2022, 4:18 IST
Last Updated 8 ಸೆಪ್ಟೆಂಬರ್ 2022, 4:18 IST
ಪಾರ್ಥ ಚಟರ್ಜಿ
ಪಾರ್ಥ ಚಟರ್ಜಿ   

ಕೋಲ್ಕತ್ತ: ಜೈಲಿನಲ್ಲಿರುವ ಮಾಜಿ ಸಚಿವ, ಟಿಎಂಸಿಯಿಂದ ಅಮಾನತುಗೊಂಡಿರುವ ಮುಖಂಡ ಪಾರ್ಥ ಚಟರ್ಜಿ ಅವರಿಗೆ ಪಶ್ಚಿಮ ಬಂಗಾಳ ವಿಧಾನಸಭೆಯು ಸಲಹಾ ಸಮಿತಿ ಸಭೆಗೆ ಆಹ್ವಾನ ನೀಡಿದೆ.

ಮುಂದಿನ ವಾರ ಆರಂಭಗೊಳ್ಳಲಿರುವ ಕಲಾಪದ ಭಾಗವಾಗಿ ಸೆಪ್ಟೆಂಬರ್‌ 12ರಂದು ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಈ ಸಭೆಗೆ ಜೈಲಿನಲ್ಲಿರುವ ಶಾಸಕರನ್ನು ಆಹ್ವಾನಿಸಿರುವುದು ಚರ್ಚೆಗೆ ಕಾರಣವಾಗಿದೆ. ವಿಧಾನಸಭೆಯ ಸಿಬ್ಬಂದಿ ಮೂಲಗಳ ಪ್ರಕಾರ ವಾಣಿಜ್ಯ ಸಲಹಾ ಸಮಿತಿಯ ಎಲ್ಲ ಸದಸ್ಯರನ್ನು ಸಭೆ ಆಹ್ವಾನಿಸಲಾಗಿದೆ.

ಪಾರ್ಥ ಚಟರ್ಜಿ ಅವರು ಹಾಲಿ ಶಾಸಕರು ಮತ್ತು ವಿಧಾನಸಭೆಯ ವಾಣಿಜ್ಯ ಸಲಹಾ ಸಮಿತಿ ಸದಸ್ಯರು. ಹಾಗಾಗಿ ಅವರು ಜೈಲಿನಲ್ಲಿದ್ದರೂ ಸಂಪ್ರದಾಯದಂತೆ ಆಹ್ವಾನ ನೀಡಲಾಗಿದೆ. ಅವರ ಮನೆಯ ವಿಳಾಸಕ್ಕೆ ಆಹ್ವಾನ ಪತ್ರಿಕೆಯನ್ನೂ ಕಳುಹಿಸಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಟಿಎಂಸಿಯಿಂದ ಅಮಾನತುಗೊಂಡಿರುವ ಚಟರ್ಜಿ ಅವರನ್ನು ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಜುಲೈ 23ರಂದು ಜಾರಿ ನಿರ್ದೇಶನಾಲಯ ಬಂಧಿಸಿದೆ. ಜುಲೈ 28ರಂದು ಚಟರ್ಜಿ ಅವರನ್ನು ಸಂಪುಟದಿಂದ ಕೈಬಿಡಲಾಗಿದ್ದು, ಪಕ್ಷದ ಎಲ್ಲ ಹುದ್ದೆಗಳಿಂದ ಅಮಾನತುಗೊಳಿಸಲಾಗಿದೆ.

ವಿಧಾನಸಭೆಯ ಎಲ್ಲ ಸಮಿತಿಗಳಿಂದಲೂ ಚಟರ್ಜಿ ಅರನ್ನು ಕೈಬಿಡಲಾಗಿದೆ. ಆದರೆ ವಾಣಿಜ್ಯ ಸಲಹಾ ಸಮಿತಿಯಲ್ಲಿ ಸದಸ್ಯರಾಗೇ ಉಳಿದುಕೊಂಡಿದ್ದಾರೆ.

ಮುಂಗಾರು ಅಧಿವೇಶನದ ಮುಂದುವರಿದ ಕಲಾಪವು ಸೆಪ್ಟೆಂಬರ್‌ 14ರಿಂದ ಆರಂಭಗೊಳ್ಳಲಿದೆ. ಸೆ. 22ರ ವರೆಗೆ ಕಲಾಪವು ಮುಂದುವರಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.