ADVERTISEMENT

ಮಾರುತಿ 800ಗೆ 40 ವರ್ಷ: ಇಂದಿರಾ, ರಾಜೀವ್ ಕೊಡುಗೆ ಸ್ಮರಿಸಿದ ಜೈರಾಮ್ ರಮೇಶ್

ಪಿಟಿಐ
Published 14 ಡಿಸೆಂಬರ್ 2023, 6:09 IST
Last Updated 14 ಡಿಸೆಂಬರ್ 2023, 6:09 IST
<div class="paragraphs"><p>ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್</p></div>

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

   

 (ಚಿತ್ರ ಕೃಪೆ–ಪಿಟಿಐ)

ನವದೆಹಲಿ: ‘ಮಾರುತಿ 800' ಕಾರು ಬಿಡುಗಡೆಯಾಗಿ ಇಂದಿಗೆ 40 ವರ್ಷಗಳನ್ನು ಪೂರೈಸಿದೆ. ಇದರಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪರಿಣಾಮಕಾರಿ ಪಾತ್ರ ವಹಿಸಿದ್ದರು ಎಂದು ಹಿರಿಯ ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್‌ ಸ್ಮರಿಸಿದ್ದಾರೆ.

ADVERTISEMENT

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘40 ವರ್ಷಗಳ ಹಿಂದೆ ಜನರ ಕಾರು ‘ಮಾರುತಿ 800' ಬಿಡುಗಡೆಯಾಗಿತ್ತು. ಈ ಕಾರ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯನ್ನು ರಾಷ್ಟ್ರವು ಸ್ಮರಿಸುತ್ತದೆ. ಹಾಗೂ ಐತಿಹಾಸಿಕ ಸುಜುಕಿ-ಮಾರುತಿ ಜಂಟಿ ಉದ್ಯಮವನ್ನು ಸ್ಥಾಪಿಸಿದ ಒ. ಸುಜುಕಿ ಮತ್ತು ವಿ. ಕೃಷ್ಣಮೂರ್ತಿ ಅವರನ್ನು ನೆನಪಿಸಿಕೊಳ್ಳುವುದು ಸಹ ಮುಖ್ಯವಾಗಿದೆ' ಎಂದು ಹೇಳಿದ್ದಾರೆ.

‘ಕೃಷ್ಣಮೂರ್ತಿ ಅವರು ಭಾರತದ ಶ್ರೇಷ್ಠ ಸಾರ್ವಜನಿಕ ವಲಯದ ವ್ಯವಸ್ಥಾಪಕರಲ್ಲಿ ಒಬ್ಬರು. ಅವರದು ಅತ್ಯಂತ ಆಕರ್ಷಕ ವ್ಯಕ್ತಿತ್ವ' ಎಂದು ರಮೇಶ್ ಹೇಳಿದ್ದಾರೆ.

1983ರ ಡಿಸೆಂಬರ್ 14ರಂದು ಐಕಾನಿಕ್ ಮಾರುತಿ 800 ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಇದು ಭಾರತ ಕಂಡ ಅತ್ಯಂತ ಯಶಸ್ವಿ ಕಾರುಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.