ADVERTISEMENT

ಫೆ.10–15ರ ವರೆಗೆ ಸಚಿವ ಜೈಶಂಕರ್‌ ಆಸ್ಟ್ರೇಲಿಯಾ, ಫಿಲಿಪ್ಪೀನ್ಸ್‌ಗೆ ಭೇಟಿ

ಪಿಟಿಐ
Published 9 ಫೆಬ್ರುವರಿ 2022, 10:45 IST
Last Updated 9 ಫೆಬ್ರುವರಿ 2022, 10:45 IST
ಎಸ್‌.ಜೈಶಂಕರ್‌
ಎಸ್‌.ಜೈಶಂಕರ್‌   

ನವದೆಹಲಿ: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಆರು ದಿನಗಳ ಕಾಲ ಆಸ್ಟ್ರೇಲಿಯಾ ಮತ್ತು ಫಿಲಿಪ್ಪೀನ್ಸ್‌ ಭೇಟಿ ನೀಡಲಿದ್ದು ಗುರುವಾರದಿಂದ ಅಧಿಕೃತ ಪ್ರವಾಸ ಆರಂಭಿಸಲಿದ್ದಾರೆ.

ಫೆಬ್ರುವರಿ 10 ರಿಂದ 13ರವರೆಗೆ ಸಚಿವರು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಲಿದ್ದಾರೆ. ವಿದೇಶಾಂಗ ಸಚಿವರಾದ ನಂತರ ಇದು ಅವರ ಮೊದಲ ಭೇಟಿಯಾಗಿದೆ.

ಫೆಬ್ರುವರಿ 13 ರಿಂದ 15 ರವರೆಗೆ ಫಿಲಿಪ್ಪೀನ್ಸ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಮೂರು ಬ್ಯಾಟರಿಗಳನ್ನು ಖರೀದಿಸಲು ಫಿಲಿಪ್ಪೀನ್ಸ್‌ ನೊಂದಿಗೆ 375 ದಶಲಕ್ಷ ಡಾಲರ್‌ ಒಪ್ಪಂದಕ್ಕೆ (ಒಂದು ಮಿಲಿಯನ್ ಎಂದರೆ 10 ಲಕ್ಷ) ಸಹಿ ಮಾಡಿದ ಎರಡು ವಾರಗಳ ನಂತರ ಈ ಭೇಟಿ ಕೈಗೊಳ್ಳುತ್ತಿದ್ದಾರೆ.

ADVERTISEMENT

ಫೆಬ್ರವರಿ 11 ರಂದು ಮೆಲ್ಬರ್ನ್‌ನಲ್ಲಿ ನಡೆಯಲಿರುವ ನಾಲ್ಕನೇ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಜೈಶಂಕರ್‌ ಅವರು ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ವಿದೇಶಾಂಗ ಸಚಿವರೊಂದಿಗೆ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.