ADVERTISEMENT

ಇದೇ 28ರಿಂದ ಸಚಿವ ಜೈಶಂಕರ್ ಶ್ರೀಲಂಕಾ ಪ್ರವಾಸ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 14:23 IST
Last Updated 26 ಮಾರ್ಚ್ 2022, 14:23 IST
ಎಸ್. ಜೈಶಂಕರ್, ವಿದೇಶಾಂಗ ಸಚಿವ
ಎಸ್. ಜೈಶಂಕರ್, ವಿದೇಶಾಂಗ ಸಚಿವ   

ಕೊಲಂಬೊ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಇದೇ 28ರಿಂದ 30ರವರೆಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.

ಇದೇ ವೇಳೆ ಅವರು ಬಿಮ್‌ಸ್ಟೆಕ್ (ಬಿಐಎಂಎಸ್‌ಟಿಇಸಿ) ಶೃಂಗಸಭೆಯಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕೊಲಂಬೊದಲ್ಲಿರುವ ಭಾರತದ ಹೈ ಕಮಿಷನ್‌ ಕಚೇರಿ ತಿಳಿಸಿದೆ.

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಲಂಕಾಕ್ಕೆ ಭಾರತ ಆರ್ಥಿಕ ನೆರವು ಘೋಷಿಸಿದ ಬಳಿಕ ವಿದೇಶಾಂಗ ಸಚಿವರು ಅಲ್ಲಿಗೆ ಕೈಗೊಳ್ಳುತ್ತಿರುವ ಮೊದಲ ಪ್ರವಾಸ ಇದಾಗಲಿದೆ.

ADVERTISEMENT

ಭಾರತ ಮತ್ತು ಶ್ರೀಲಂಕಾದ ಜತೆಗೆ ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ನೇಪಾಳ ಮತ್ತು ಭೂತಾನ್ ‘ಬಿಮ್‌ಸ್ಟೆಕ್’ನ ಸದಸ್ಯ ರಾಷ್ಟ್ರಗಳಾಗಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಇದೇ 30ರಂದು ‘ಬಿಮ್‌ಸ್ಟೆಕ್‌’ನ ವರ್ಚುವಲ್‌ ಸಭೆಯಲ್ಲಿ ಪಾಲ್ಗೊಳ್ಳುವರು. ಸದಸ್ಯ ರಾಷ್ಟ್ರಗಳ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.